alex Certify ವೈರಲ್ ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ ಚಹಾಲ್ ಪತ್ನಿ: ಧನಶ್ರೀ ಡಾನ್ಸ್ ಗೆ ನೆಟ್ಟಿಗರು ಫಿದಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈರಲ್ ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ ಚಹಾಲ್ ಪತ್ನಿ: ಧನಶ್ರೀ ಡಾನ್ಸ್ ಗೆ ನೆಟ್ಟಿಗರು ಫಿದಾ….!

ನೀವು ಇನ್‌ಸ್ಟಾಗ್ರಾಮ್‌ನಲ್ಲಿ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಪತ್ನಿ ಧನಶ್ರೀ ವರ್ಮಾ ಅವರನ್ನು ಅನುಸರಿಸುತ್ತಿದ್ರೆ, ಅವರ ನೃತ್ಯದ ವಿಡಿಯೋಗಳನ್ನು ಬಹುಶಃ ಗಮನಿಸುತ್ತಿರುತ್ತೀರಾ. ಅವರು ಆಗಾಗ್ಗೆ ತಮ್ಮ ನೃತ್ಯದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಹೊಸ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಸೂಪರ್ಹಿಟ್ ತೆಲುಗು ಹಾಡು ರಾ ರಾ ರೆಡ್ಡಿಗೆ ನೃತ್ಯ ಮಾಡಿದ್ದಾರೆ..

ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಧನಶ್ರೀ ತನ್ನ ಡಾನ್ಸ್ ಸಂಗಾತಿಯೊಂದಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಇಬ್ಬರೂ ಕೂಡ ತಮ್ಮ ಶಕ್ತಿಯುತ ನೃತ್ಯ ಪ್ರದರ್ಶನದಿಂದ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋವನ್ನು 2 ಮಿಲಿಯನ್ ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಭಿಮಾನಿಗಳು ಮತ್ತು ಅನುಯಾಯಿಗಳು ಇವರ ನೃತ್ಯದ ವಿಡಿಯೋವನ್ನು ಸಂಪೂರ್ಣವಾಗಿ ಇಷ್ಟಪಟ್ಟಿದ್ದಾರೆ.

ಈ ಹಿಂದೆ ಧನಶ್ರೀ ಇಂಗ್ಲೆಂಡ್‌ನಲ್ಲಿ ಡಾನ್ಸ್ ಮಾಡಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಅವರು ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ ಕಾಜೋಲ್‌ನ ಮೇರೆ ಖ್ವಾಬೊನ್ ಮೇಗೆ ನೃತ್ಯ ಮಾಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...