alex Certify ಕೊಹ್ಲಿಗೆ ಡಾನ್ಸ್ ಕಲಿಸಿಕೊಟ್ಟ ಚಹಾಲ್ ಪತ್ನಿ ಧನುಶ್ರೀ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಹ್ಲಿಗೆ ಡಾನ್ಸ್ ಕಲಿಸಿಕೊಟ್ಟ ಚಹಾಲ್ ಪತ್ನಿ ಧನುಶ್ರೀ…..!

ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಪತ್ನಿ ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣಗಳಲ್ಲಿ  ಸಕ್ರಿಯರಾಗಿದ್ದಾರೆ. ತಮ್ಮ ಡ್ಯಾನ್ಸ್ ಮೂಲಕ ಅನೇಕ ಅಭಿಮಾನಿಗಳಿಗೆ ಮನರಂಜನೆ ನೀಡ್ತಿದ್ದಾರೆ.

ಧನಶ್ರೀ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಡಿಯೋ ಸದ್ಯ ಚರ್ಚೆಯಲ್ಲಿದೆ. ಐಪಿಎಲ್ ತಂಡ ಆರ್‌ಸಿಬಿ, ತನ್ನ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಇದರಲ್ಲಿ ಧನಶ್ರೀ, ವಿರಾಟ್ ಕೊಹ್ಲಿಗೆ ನೃತ್ಯ ಕಲಿಸುತ್ತಿದ್ದಾರೆ.

ಈ ವಿಡಿಯೋದಲ್ಲಿ ಚಾಹಲ್ ಪತ್ನಿ ಧನಶ್ರೀ ವಿರಾಟ್ ಕೊಹ್ಲಿಗೆ ಹುಕ್ ಸ್ಟೆಪ್ ಕಲಿಯಲು ಸಹಾಯ ಮಾಡಿದ್ದಾರೆ. ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಧನಶ್ರೀ, ವಿರಾಟ್‌ಗೆ ಹೇಗೆ ಡಾನ್ಸ್ ಕಲಿಸಿದರು ಎಂಬುದು ವೀಡಿಯೊದಲ್ಲಿ ನೋಡಬಹುದು.

ವಿರಾಟ್ ಕೊಹ್ಲಿ, ಯುಜ್ವೇಂದ್ರ ಚಹಾಲ್, ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಮೊಹಮ್ಮದ್ ಸಿರಾಜ್ ರನ್ನು ಈ ವಿಡಿಯೋದಲ್ಲಿ ನೋಡಬಹುದು.

ಧನಶ್ರೀ ವರ್ಮಾ, ನೃತ್ಯದ ಯುಟ್ಯೂಬ್ ಚಾನಲ್ ನಡೆಸುತ್ತಿದ್ದಾರೆ. ಈ ಚಾನಲ್ 25 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ.

ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ಜನಪ್ರಿಯ ದಂಪತಿಗಳಲ್ಲಿ ಒಬ್ಬರು. ಅವರು ಆಗಾಗ್ಗೆ ತಮ್ಮ ಸುಂದರ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಡಿಸೆಂಬರ್ 2020 ರಲ್ಲಿ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...