ಬಾಲಿವುಡ್ ತಾರೆ ಗೋವಿಂದ ಅವರ ‘ಕಿಸಿ ಡಿಸ್ಕೋ ಮೇ ಜಾಯೆ’ ಹಾಡಿನ ಕುಣಿತಕ್ಕೆ ದೊಡ್ಡ ಅಭಿಮಾನಿಗಳೇ ಇದ್ದಾರೆ. 1998 ರ ಚಲನಚಿತ್ರ ‘ಬಡೆ ಮಿಯಾನ್ ಛೋಟೆ ಮಿಯಾನ್’ ನಿಂದ ಗೋವಿಂದ ಮತ್ತು ರವೀನಾ ಟಂಡನ್ ಅಭಿನಯದ ‘ಕಿಸಿ ಡಿಸ್ಕೋ ಮೇ ಜಾಯೆ’ ಪಡ್ಡೆ ಹೈಕಳನ್ನು ಹುಚ್ಚೆದ್ದು ಕುಣಿವಂತೆ ಮಾಡಿತ್ತು. ಹಾಡಿನ ಶೈಲಿ, ಅದಕ್ಕೆ ತಕ್ಕಂತ ಗೋವಿಂದ್ ಅವರ ಸ್ಟೆಪ್ ಇನ್ನೂ ಅಚ್ಚಳಿಯದೇ ಉಳಿದಿದೆ. ಅಲ್ಕಾ ಯಾಗ್ನಿಕ್ ಮತ್ತು ಉದಿತ್ ನಾರಾಯಣ್ ಅವರ ಹಾಡು ಇಂದಿಗೂ ಅಭಿಮಾನಿಗಳ ಮೆಚ್ಚಿನದ್ದಾಗಿದೆ.
ಇಂದಿಗೂ ಈ ಹಾಡು ಮತ್ತು ಡ್ಯಾನ್ಸ್ ಮಾಸಿಲ್ಲ ಎಂಬುದಕ್ಕೆ ಉದಾಹರಣೆ ಎಂಬಂತೆ ಕ್ರಿಕೆಟಿಗ ಯುವರಾಜ್ ಸಿಂಗ್ ಅನುಕರಿಸಿ ಗಮನ ಸೆಳೆದಿದ್ದಾರೆ. ವೀಕೆಂಡ್ ಮಸ್ತಿಯ ವೇಳೆ ಯುವರಾಜ್ ಸಿಂಗ್, ಈ ಹಾಡಿಗೆ ಕುಣಿದು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಯುವರಾಜ್ ಸಿಂಗ್ ವಿಡಿಯೋಗೆ “ವೀಕೆಂಡ್ ವೈಬ್ಸ್” ಎಂದು ಶೀರ್ಷಿಕೆ ನೀಡಿದ್ದಾರೆ. ಬಿಳಿ ಶರ್ಟ್ ಮತ್ತು ಜೋಡಿ ಡೆನಿಮ್ ಧರಿಸಿ ಹಾಡಿಗೆ ನೃತ್ಯ ಮಾಡುತ್ತಿದ್ದು, ಸ್ಥಳ ತಿಳಿದಿಲ್ಲವಾದರೂ, ಯುವರಾಜ್ ಹಾಡಿನ ಸಿಗ್ನೇಚರ್ ಸ್ಟೆಪ್ಸ್ ಮಾಡುವಾಗ ಕೈಯಲ್ಲಿ ಸ್ಪೀಕರ್ನೊಂದಿಗೆ ಮೆಟ್ಟಿಲುಗಳಿದು ಹೋಗುತ್ತಿರುವುದು ಕಂಡುಬರುತ್ತದೆ.
ಈ ಪೋಸ್ಟ್ ಕೆಲವೇ ಗಂಟೆಗಳಲ್ಲಿ 1 ಮಿಲಿಯನ್ ವೀಕ್ಷಣೆ ಗಳಿಸಿದ್ದು, 1.9 ಲಕ್ಷ ಲೈಕ್ ಸಂಗ್ರಹಿಸಿದೆ. ಕ್ರಿಕೆಟ್ ಅಭಿಮಾನಿಗಳು ಕಾಮೆಂಟ್ ವಿಭಾಗವನ್ನು ತುಂಬಿಸಿಬಿಟ್ಟಿದ್ದು, ಅನೇಕರು ಕ್ರಿಕೆಟ್ಗೆ ಹಿಂತಿರುಗುವಂತೆ ವಿನಂತಿಸಿದ್ದಾರೆ.