ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್‌ನಲ್ಲಿ ವಿಲಕ್ಷಣ ವಿಷಯವೂ ಸಹ ಗಮನ ಸೆಳೆಯುತ್ತಿರುತ್ತದೆ. ಇದೀಗ ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಕ್ಲಿಪ್‌ನಲ್ಲಿ ಬೀದಿ ಬದಿಯ ಕಾಟನ್ ಕ್ಯಾಂಡಿ ಮಾರಾಟಗಾರನು ಮನುಷ್ಯನ ಕೂದಲನ್ನು ಹಣದ ಬದಲು ಪಾವತಿಯಾಗಿ ಸ್ವೀಕರಿಸುತ್ತಿರುವುದನ್ನು ಕಾಣಬಹುದು.
ಫುಡ್ಡಿ ವಿಶಾಲ್ ಅವರು ಯೂಟ್ಯೂಬ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ಸಣ್ಣ ಕ್ಲಿಪ್‌ನಲ್ಲಿ, ಬೀದಿ ಬದಿಯ ಮಾರಾಟಗಾರನು ಮನುಷ್ಯನ ಕೂದಲಿಗೆ ಬದಲಾಗಿ ಚಿಕ್ಕ ಮಕ್ಕಳಿಗೆ ಕಾಟನ್ ಕ್ಯಾಂಡಿಯನ್ನು ಮಾರಾಟ ಮಾಡುವುದನ್ನು ಕಾಣಬಹುದು.
ವಿದೇಶ ಪ್ರಯಾಣ ಕೈಗೊಳ್ಳುವವರಿಗೆ ಎದುರಾಗುತ್ತೆ ಈ ಸಮಸ್ಯೆ
ಆ ಮಾರಾಟಗಾರನು ಬುಧಿಯಾ ಕೆ ಬಾಲ್ ಎಂದು ಜನಪ್ರಿಯವಾಗಿ ಕರೆಯಲ್ಪಡುವುದನ್ನು ಮಾರಾಟ ಮಾಡುತ್ತಾನೆ, ಜನರು ಕೂದಲಿನ ತುಂಡುಗಳನ್ನು ಬೈಕು ಮೇಲೆ ನೇತಾಡುವ ಚೀಲದಲ್ಲಿ ಹಾಕುತ್ತಾರೆ.
ಕೂದಲು ಸಂಗ್ರಹಿಸಿದಾತ ಬಳಿಕ ಪ್ರತಿ ಕೆ.ಜಿ.ಗೆ 3000 ರೂ.ನಂತೆ ಮಾರಾಟ ಮಾಡುತ್ತಾರೆ. ಬಳಿಕ ಅದನ್ನು ವಿಗ್ ತಯಾರಿಸಲು ಬಳಸುತ್ತಾರೆ ಎಂದು ಮಾರಾಟಗಾರ ಮಾಹಿತಿ ನೀಡಿದರು.
YouTuber visits street vendor who barters hair for cotton candy. Video is viral