ʼಮಿಸ್ಟರ್ ಬೀಸ್ಟ್ʼ ಎಂದು ಖ್ಯಾತಿಯನ್ನು ಪಡೆದಿರುವ ಅಮೆರಿಕದ ಜನಪ್ರಿಯ ಯುಟ್ಯೂಬರ್ ಜೇಮ್ಸ್ ಸ್ಟೀಫನ್ಸ್ ಡೋನಾಲ್ಡ್ಸನ್ ಹೊಸದಾಗಿ ಅನಾವರಣಗೊಂಡಿರುವ ಸೋಶಿಯಲ್ ಮೀಡಿಯಾ ವೇದಿಕೆ ಥ್ರೆಡ್ನಲ್ಲಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಥ್ರೆಡ್ನಲ್ಲಿ 1ಮಿಲಿಯನ್ ಫಾಲೋವರ್ಸ್ನ್ನು ಸಂಪಾದಿಸಿದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಸ್ಟೀಫನ್ಸ್ 2.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ವಿಚಿತ್ರ ಅಂದರೆ ಮೆಟಾ ಕಂಪನಿಯ ಸಿಇಓ ಮಾರ್ಕ್ ಜುಕರ್ಬರ್ಗ್ ಥ್ರೆಡ್ನಲ್ಲಿ 1.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಆದರೆ ಥ್ರೆಡ್ ಸಂಸ್ಥಾಪಕನನ್ನೇ ಹಿಂದೆ ಸರಿಸಿರುವ ಸ್ಟೀಫನ್ಸ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಜುಲೈ 5ರಿಂದ ಥ್ರೆಡ್ ಆ್ಯಪ್ ಅನಾವರಣಗೊಂಡಿದ್ದು ಥೇಟ್ ಟ್ವಿಟರ್‌ನಂತೆಯೇ ಕಾರ್ಯನಿರ್ವಹಿಸುತ್ತಿದೆ.
Instagram ಥ್ರೆಡ್‌ಗಳು ಮೆಟಾದಿಂದ ಹೊಸದಾಗಿ ಪ್ರಾರಂಭಿಸಲಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆಗಿದೆ, ಇದನ್ನು ಎಲೋನ್ ಮಸ್ಕ್ ಒಡೆತನದ ಟ್ವಿಟರ್‌ನಂತೆಯೇ ಪರಿಗಣಿಸಲಾಗಿದೆ. ಅಪ್ಲಿಕೇಶನ್ ಪ್ರಸ್ತುತ Android ಮತ್ತು iOS ಬಳಕೆದಾರರಿಗೆ ಮಾತ್ರ ಮೊಬೈಲ್ ಅಪ್ಲಿಕೇಶನ್ ಆವೃತ್ತಿಯಾಗಿ ಲಭ್ಯವಿದೆ ಮತ್ತು ಅದರ ಡೆಸ್ಕ್‌ಟಾಪ್ ಫಾರ್ಮ್ ಅನ್ನು ಇನ್ನೂ ಆರಂಭಗೊಳ್ಳಬೇಕಿದೆ.