ನೀವು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಪೈಕಿಯಾಗಿದ್ದರೆ ಮನೆಯಲ್ಲೇ ಕೂತು ಲಕ್ಷ ರೂಪಾಯಿ ಸಂಪಾದಿಸುವ ಸದಾವಕಾಶ ಕೂಡಿ ಬಂದಿದೆ.
ಇನ್ಸ್ಟಾಗ್ರಾಂ ರೀಲ್ಸ್ ಹಾಗೂ ಟಿಕ್ಟಾಕ್ಗೆ ಠಕ್ಕರ್ ನೀಡುವ ಸಲುವಾಗಿ ಯುಟ್ಯೂಬ್ ಶಾರ್ಟ್ಸ್ ಎಂಬ ಹೊಸ ವೇದಿಕೆಯನ್ನು ಸೃಷ್ಟಿಸಿತ್ತು. ಇದೀಗ ಈ ವೇದಿಕೆ ಮೂಲಕ ಕಂಟೆಂಟ್ ಕ್ರಿಯೇಟರ್ಗಳು ಎಷ್ಟು ಹಣ ಸಂಪಾದಿಸಬಹುದು ಎಂಬ ಐಡಿಯಾವನ್ನ ಯುಟ್ಯೂಬ್ ಸಂಸ್ಥೆ ನೀಡಿದೆ.
ಯುಟ್ಯೂಬ್ ಶಾರ್ಟ್ಸ್ ಫಂಡ್ಸ್ ರಿಲೀಸ್ ಮಾಡಲಾಗಿದೆ. 100 ಮಿಲಿಯನ್ ನ್ನು ಕ್ರಿಯೆಟರ್ಗಳಿಗೆ ನೀಡಲಾಗುತ್ತದೆ. 2021 ಹಾಗೂ 22ರಲ್ಲಿ 100 ಮಿಲಿಯನ್ ನೀಡಲಾಗುತ್ತದೆ. ಪ್ರತಿ ತಿಂಗಳು ಕಂಟೆಂಟ್ ಕ್ರಿಯೇಟರ್ಗಳನ್ನು ಸಂಪರ್ಕಿಸಿ ಹಣ ಪಾವತಿ ಮಾಡೋದಾಗಿ ಯುಟ್ಯೂಬ್ ಹೇಳಿದೆ.
ಯುಟ್ಯೂಬ್ ನೀಡಿರುವ ಮಾಹಿತಿಯ ಪ್ರಕಾರ ಕಂಟೆಂಟ್ ಕ್ರಿಯೇಟರ್ಗಳು ಈ ವೇದಿಕೆಯ ಮೂಲಕ 7400 ರೂಪಾಯಿಯಿಂದ 7 ಲಕ್ಷ 40 ಸಾವಿರ ರೂಪಾಯಿಯವರೆಗೂ ಸಂಪಾದಿಸಬಹುದು ಎಂದು ಹೇಳಿದೆ.
ಪ್ರತಿ ಶಾರ್ಟ್ಸ್ ಎಷ್ಟು ವೀವ್ಸ್ ಸಂಪಾದಿಸಿದೆ ಅನ್ನೋದನ್ನ ಆಧರಿಸಿ ಕಂಟೆಂಟ್ ಕ್ರಿಯೇಟರ್ಗಳಿಗೆ ವೇತನ ಪಾವತಿಯಾಗಲಿದೆ ಎಂದು ಕಂಪನಿ ತಿಳಿಸಿದೆ.