alex Certify ಯೂಟ್ಯೂಬ್ ನೋಡಿ ಪ್ರಯೋಗ ಮಾಡಲು ಹೋದ ಬಾಲಕಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯೂಟ್ಯೂಬ್ ನೋಡಿ ಪ್ರಯೋಗ ಮಾಡಲು ಹೋದ ಬಾಲಕಿ ಸಾವು

ಉಡುಪಿ: ವಿದ್ಯಾರ್ಥಿನಿಯೊಬ್ಬಳು ಯೂಟ್ಯೂಬ್ ನೋಡಿ ಪ್ರಯೋಗ ಮಾಡುವ ವೇಳೆ ಮೃತಪಟ್ಟ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

ಉಡುಪಿಯ ಬ್ರಹ್ಮಗಿರಿಯ ಸಾಯಿರಾಧಾ ಫ್ರೈಡ್ ಅಪಾರ್ಟ್ ಮೆಂಡ್ ನಿವಾಸಿ ಪ್ರವೀಣ್ ಶೆಟ್ಟಿ ಅವರ ಪುತ್ರಿ ಮಂಗಳಾದೇವಿ(11) ಮೃತಪಟ್ಟ ಬಾಲಕಿ ಎಂದು ಹೇಳಲಾಗಿದೆ. 6ನೇ ತರಗತಿ ಓದುತ್ತಿದ್ದ ಮಂಗಳಾದೇವಿ ಯೂಟ್ಯೂಬ್ ನಲ್ಲಿ ಬರುವ ವಿಡಿಯೋಗಳನ್ನು ನೋಡಿ ಅದನ್ನು ಪ್ರಯೋಗ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಳು.

ಶನಿವಾರ ಮಧ್ಯಾಹ್ನ 3ರಿಂದ ಸಂಜೆ 5 ಗಂಟೆಯ ನಡುವೆ ಬಾತ್ರೂಮ್ ಬಟ್ಟೆ ಕಟ್ಟಿ ಯಾವುದೋ ಪ್ರಯೋಗ ಮಾಡುವ ವೇಳೆ ಕುತ್ತಿಗೆಗೆ ಬಟ್ಟೆ ಬಿಗಿದುಕೊಂಡು ಮೃತಪಟ್ಟಿದ್ದಾಳೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...