alex Certify ಕ್ರಿಕೆಟ್ ಆಡಲು ಹೋದಾಗಲೇ ದುರಂತ: ಆಕಸ್ಮಿಕವಾಗಿ ಹಳ್ಳಕ್ಕೆ ಬಿದ್ದು ಇಬ್ಬರು ಯುವಕರು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ಆಡಲು ಹೋದಾಗಲೇ ದುರಂತ: ಆಕಸ್ಮಿಕವಾಗಿ ಹಳ್ಳಕ್ಕೆ ಬಿದ್ದು ಇಬ್ಬರು ಯುವಕರು ಸಾವು

ಮಂಗಳೂರು: ಆಕಸ್ಮಿಕವಾಗಿ ಹಳ್ಳಕ್ಕೆ ಬಿದ್ದು ಇಬ್ಬರು ಯುವಕರು ಸಾವು ಕಂಡಿದ್ದಾರೆ. ಅಳಪೆ ನಿವಾಸಿ ವರುಣ್(27) ಮತ್ತು ಎಕ್ಕೂರು ನಿವಾಸಿ ವೀಕ್ಷಿತ್(28) ಮೃತಪಟ್ಟವರು ಎಂದು ಹೇಳಲಾಗಿದೆ.

ಕ್ರಿಕೆಟ್ ಆಡಲು ತೆರಳಿದ್ದಾಗ ಹಳ್ಳದ ದಂಡೆಯಲ್ಲಿ ಯುವಕರು ಕುಳಿತಿದ್ದಾರೆ. ಈ ವೇಳೆ ಆಯ ತಪ್ಪಿ ಹರಿಯುವ ಹಳ್ಳಕ್ಕೆ ವರುಣ್ ಬಿದ್ದಿದ್ದು, ರಕ್ಷಣೆಗಾಗಿ ಹಳ್ಳಕ್ಕೆ ಇಳಿದ ವೀಕ್ಷಿತ್ ಸಹ ನೀರು ಪಾಲಾಗಿದ್ದಾರೆ. ಹಳ್ಳದಲ್ಲಿ ಹೂಳು ತುಂಬಿದ ಕಾರಣ ಇಬ್ಬರೂ ನೀರು ಪಾಲಾಗಿದ್ದಾರೆ. ಯುವಕರ ಮೃತ ದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...