ಮಂಗಳೂರು: ಆಕಸ್ಮಿಕವಾಗಿ ಹಳ್ಳಕ್ಕೆ ಬಿದ್ದು ಇಬ್ಬರು ಯುವಕರು ಸಾವು ಕಂಡಿದ್ದಾರೆ. ಅಳಪೆ ನಿವಾಸಿ ವರುಣ್(27) ಮತ್ತು ಎಕ್ಕೂರು ನಿವಾಸಿ ವೀಕ್ಷಿತ್(28) ಮೃತಪಟ್ಟವರು ಎಂದು ಹೇಳಲಾಗಿದೆ.
ಕ್ರಿಕೆಟ್ ಆಡಲು ತೆರಳಿದ್ದಾಗ ಹಳ್ಳದ ದಂಡೆಯಲ್ಲಿ ಯುವಕರು ಕುಳಿತಿದ್ದಾರೆ. ಈ ವೇಳೆ ಆಯ ತಪ್ಪಿ ಹರಿಯುವ ಹಳ್ಳಕ್ಕೆ ವರುಣ್ ಬಿದ್ದಿದ್ದು, ರಕ್ಷಣೆಗಾಗಿ ಹಳ್ಳಕ್ಕೆ ಇಳಿದ ವೀಕ್ಷಿತ್ ಸಹ ನೀರು ಪಾಲಾಗಿದ್ದಾರೆ. ಹಳ್ಳದಲ್ಲಿ ಹೂಳು ತುಂಬಿದ ಕಾರಣ ಇಬ್ಬರೂ ನೀರು ಪಾಲಾಗಿದ್ದಾರೆ. ಯುವಕರ ಮೃತ ದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.