alex Certify BIG BREAKING: ಕಾಂಗ್ರೆಸ್ ನಿಂದ ಐವರು ಯುವಕರಿಗೆ ಟಿಕೆಟ್: ಅರ್ಧದಷ್ಟು ಅಭ್ಯರ್ಥಿಗಳು 40 ವರ್ಷದೊಳಗಿನವರು: ಡಿಸಿಎಂ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಕಾಂಗ್ರೆಸ್ ನಿಂದ ಐವರು ಯುವಕರಿಗೆ ಟಿಕೆಟ್: ಅರ್ಧದಷ್ಟು ಅಭ್ಯರ್ಥಿಗಳು 40 ವರ್ಷದೊಳಗಿನವರು: ಡಿಸಿಎಂ ಮಾಹಿತಿ

ನವದೆಹಲಿ: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ಮತದಾನ ನಡೆಯಲಿದ್ದು, ಈ ಬಾರಿ ಕಾಂಗ್ರೆಸ್ ನಿಂದ ಐವರು ಯುವಕರಿಗೆ ಟಿಕೆಟ್ ನೀಡಲಾಗುತ್ತಿದೆ.

ದೆಹಲಿಯಲ್ಲಿ ಈ ಕುರಿತಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್, ಈ ಬಾರಿ ಕಾಂಗ್ರೆಸ್ ನಿಂದ ಐವರು ಯುವಕರಿಗೆ ಟಿಕೆಟ್ ನೀಡಲಾಗಿದೆ. ವಿದ್ಯಾವಂತರು, ಹೊಸ ಮುಖಗಳಿಗೆ ಕಾಂಗ್ರೆಸ್ ಟಿಕೆಟ್ ನೀಡುತ್ತಿದ್ದೇವೆ. ಶೇಕಡ 50ರಷ್ಟು ಅಭ್ಯರ್ಥಿಗಳು 40 ವರ್ಷದೊಳಗಿನವರಾಗಿದ್ದಾರೆ ಎಂದರು.

ರಾಜ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇಂದೇ ಪ್ರಕಟವಾಗಬಹುದು. ಈ ಬಾರಿ ಕಾಂಗ್ರೆಸ್ ನಿಂದ ಯುವಕರಿಗೆ, ವಿದ್ಯಾವಂತರಿಗೆ ಆದ್ಯತೆ ನೀಡಲಾಗಿದೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿ ಗೆಲ್ಲಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...