
ಹೈದರಾಬಾದ್: ಮೇಕೆ ಕದ್ದ ಆರೋಪದಲ್ಲಿ ಇಬ್ಬರು ಯುವಕರನ್ನು ತಲೆಕೆಳಗಾಗಿ ನೇತು ಹಾಕಿ ಮನಬಂದಂತೆ ಥಳಿಸಿರುವ ಘಟನೆ ತೆಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಮಂದಮರಿಯಲ್ಲಿ ಈ ಘಟನೆ ನಡೆದಿದ್ದು, ಮೇಕೆ ಕದ್ದಿದ್ದಾರೆ ಎಂದು ಮೇಕೆ ಸಾಕಾಣಿಕೆ ಕೇಂದ್ರದ ಮಾಲೀಕ, ಇಬ್ಬರು ಯುವಕರನ್ನು ಹಿಡಿದು ತಲೆಕೆಳಗಾಗಿ ನೇತು ಹಾಕಿದ್ದು, ಕೆಳಗಡೆ ಹುಲ್ಲಿಗೆ ಬೆಂಕಿ ಹಾಕಿ, ಬಳಿಕ ಯುವಕರನ್ನು ಮನಬಂದಂತೆ ಥಳಿಸಿದ್ದಾನೆ.
ತೇಜಾ ಹಾಗೂ ಸಿ.ಕಿರಣ್ ಎಂಬುವವರನ್ನು ಕಟ್ಟಿಹಾಕಿ ಮನಸೋ ಇಚ್ಛೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪ್ರಕರಣ ಸಂಬಂಧ ಮೇಕೆ ಸಾಕಾಣಿಕೆ ಕೇಂದ್ರದ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.