ಆಂಧ್ರಪ್ರದೇಶ ಚೌಡವಾಡಾದಲ್ಲಿ 21 ವರ್ಷದ ರಾಮುಲಮ್ಮಾಳನ್ನು ಪ್ರೀತಿಸುವ ಭರವಸೆ ನೀಡಿದ್ದ 24 ವರ್ಷದ ರಾಮ್‍ಬಾಬು ದೈಹಿಕ ಸಂಪರ್ಕ ಬೆಳೆಸಿದ್ದ. ಕೆಲವು ದಿನಗಳ ಬಳಿಕ, ಮದುವೆಯಾಗೋಣ ಎಂದು ರಾಮುಲಮ್ಮಾ ಹೇಳಿದ ಕೂಡಲೇ ಆಕ್ರೋಶಗೊಂಡ ರಾಮ್‍ಬಾಬು ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಡಲು ಯತ್ನಿಸಿದ್ದಾನೆ.
ವಿಜಿಯನಗರಂ ಪೊಲೀಸರು ಪ್ರಕರಣ ತನಿಖೆ ನಡೆಸುತ್ತಿದ್ದಾರೆ. ಸಿಎಂ ಕೂಡ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ನಿರ್ದಾಕ್ಷಿಣ್ಯವಾಗಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ.
ದೇವಾಲಯದಲ್ಲೇ ಅರ್ಚಕನಿಂದ ಆಘಾತಕಾರಿ ಕೃತ್ಯ: ದೇವರ ದರ್ಶನಕ್ಕೆ ಬಂದ ಮಹಿಳೆ ಮೇಲೆ ಅತ್ಯಾಚಾರ
ರಾಮುಲಮ್ಮಾ ಜತೆಗೆ ಆಕೆಯ ಕುಟುಂಬಸ್ಥರಿಗೆ ಬೆಂಕಿ ತಗುಲಿದೆ. ಅವರೆಲ್ಲರೂ ರಾತ್ರಿ ವೇಳೆ ಮನೆಯ ಹೊರಗಡೆ ಮಲಗಿದ್ದಾಗ ರಾಮ್‍ಬಾಬು ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಒಂದು ಮಗುವಿಗೆ ಸುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ವಿಶಾಖಪಟ್ಟಣಂನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.