alex Certify BIG NEWS: ಕಾರ್ಡ್ ಪಾವತಿಗಳಲ್ಲಿ ಹೊಸ ಮಾರ್ಪಾಡು ತಂದ RBI | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾರ್ಡ್ ಪಾವತಿಗಳಲ್ಲಿ ಹೊಸ ಮಾರ್ಪಾಡು ತಂದ RBI

ಸ್ವಯಂಚಾಲಿತ ಡೆಬಿಟಿಂಗ್ ಫೀಚರ್‌ ಅನ್ನು ಚಾಲ್ತಿಯಲ್ಲಿಡಲು ಬ್ಯಾಂಕುಗಳು ಹಾಗೂ ವಿತ್ತೀಯ ಸಂಸ್ಥೆಗಳು ಗ್ರಾಹಕರಿಂದ ಅನುಮತಿ ಪಡೆಯಬೇಕೆಂದು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಧಿಕೃತ ಪ್ರಕಟಣೆಯೊಂದನ್ನು ಹೊರಡಿಸಿದೆ.

ಈ ಹೊಸ ನಿಯಮವು ಅಕ್ಟೋಬರ್‌ 1ರಿಂದ ಚಾಲ್ತಿಗೆ ಬರಲಿದೆ. ಆಟೋ-ಡೆಬಿಟ್ ಚಟುವಟಿಕೆಗಳಿಗೆ ತಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಸುವ ಗ್ರಾಹಕರಿಗೆ ಈ ಮಾರ್ಗಸೂಚಿ ಅನ್ವಯವಾಗಲಿದೆ. 5,000 ರೂಪಾಯಿ ಮೇಲ್ಪಟ್ಟ ಯಾವುದೇ ಪಾವತಿಗೆ ಈ ನಿಯಮ ಅನ್ವಯಿಸಲಿದೆ.

ನೆಟ್ಟಿಗರ ಟಾಪ್ ಫೇವರಿಟ್ ಪಾಕ್‌ ಕ್ರಿಕೆಟ್‌ ಪ್ರೇಮಿಯ ’ಹತಾಶೆʼ ಮೀಮ್

ಮುಂದಿನ ತಿಂಗಳಿಂದ ಜಾರಿಗೆ ಬರಲಿರುವ ಹೊಸ ನಿಯಮದ ಪ್ರಕಾರ ಕಾರ್ಡ್ ವಹಿವಾಟುಗಳಿಗೆ ಹೆಚ್ಚುವರಿ ಖಾತ್ರಿಯ (ಎಎಫ್‌ಎ) ಅಗತ್ಯವಿರಲಿದೆ. ತಮ್ಮ ಗ್ರಾಹಕರ ಖಾತೆಗಳಿಂದ ದುಡ್ಡನ್ನು ಸ್ವಯಂ-ಕಡಿತ ಮಾಡುವ 24 ಗಂಟೆಗಳ ಮುನ್ನ ತಮ್ಮ ಗ್ರಾಹಕರಿಗೆ ಬ್ಯಾಂಕುಗಳು ಹಾಗೂ ವಿತ್ತೀಯ ಸಂಸ್ಥೆಗಳು ವಿಚಾರ ತಿಳಿಸಬೇಕಾಗುತ್ತದೆ.

ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು, ಯುಪಿಐ ಅಥವಾ ಇನ್ನಾವುದೇ ಪ್ರೀಪೇಯ್ಡ್‌ ಪಾವತಿ ಡಿವೈಸ್ ಮೂಲಕ ಮಾಡಲಾಗುವ ಪಾವತಿಗಳ ಮೇಲೆ ಈ ನಿಯಮ ಜಾರಿಗೆ ಬರಲಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...