alex Certify ALERT : ಯುವತಿಯರೇ ಎಚ್ಚರ : ಹೋಟೆಲ್ ರೂಮ್ ನಲ್ಲಿ ‘ಹಿಡನ್ ಕ್ಯಾಮೆರಾ’ ಇಟ್ಟು ‘VIDEO’ ಮಾಡ್ತಿದ್ದವರು ಅಂದರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ALERT : ಯುವತಿಯರೇ ಎಚ್ಚರ : ಹೋಟೆಲ್ ರೂಮ್ ನಲ್ಲಿ ‘ಹಿಡನ್ ಕ್ಯಾಮೆರಾ’ ಇಟ್ಟು ‘VIDEO’ ಮಾಡ್ತಿದ್ದವರು ಅಂದರ್

ಬೆಂಗಳೂರು : ಹೋಟೆಲ್ ರೂಮ್ ನಲ್ಲಿ ‘ಹಿಡನ್ ಕ್ಯಾಮೆರಾ’ ಇಟ್ಟು ವಿಡಿಯೋ ಮಾಡ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೆಂಗೇರಿ ಮುಖ್ಯ ರಸ್ತೆಯ ಕೆಂಚನಾಪುರದಲ್ಲಿ ಯುವತಿಯೊಬ್ಬಳು ತನ್ನ ಪಾರ್ಟ್ನರ್ ಜೊತೆ ಹೋಟೆಲ್ ನಡೆಸುತ್ತಿದ್ದಳು. ಹೋಟೆಲ್ ಗೆ ಬರುವ ಪ್ರೇಮಿಗಳಿಗೆ ರೂಮಿನ ವ್ಯವಸ್ಥೆ ಮಾಡಿಕೊಡುತ್ತಿದ್ದರು. ನಂತರ ಅವರ ರೂಂ ನಲ್ಲಿ ಹಿಡನ್ ಕ್ಯಾಮೆರಾ ಇಟ್ಟು ಖಾಸಗಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು. ನಂತರ ಆ ವಿಡಿಯೋ ಇಟ್ಟುಕೊಂಡು ಪ್ರೇಮಿಗಳಿಗೆ ಬ್ಲ್ಯಾಕ್ ಮೇಲ್ ಲಕ್ಷಗಟ್ಟಲೇ ಹಣ ವಸೂಲಿ ಮಾಡುತ್ತಿದ್ದರು.

ಒಂದು ವೇಳೆ ಹಣ ಕೊಡದೇ ಇದ್ದರೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು. ಈ ಸಂಬಂಧ 22 ವರ್ಷದ ಯುವತಿ ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...