ಯುವತಿಯೊಬ್ಬಳು ತನ್ನ ಹೊಕ್ಕಳ ಮೇಲ್ಭಾಗದಲ್ಲಿ ಹಾಕಿಸಿಕೊಂಡಿರುವ ಟ್ಯಾಟೂ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಪ್ಪನೆಯ ಬಣ್ಣದ ಟ್ಯಾಟೂ ಕೂಡ ಅಷ್ಟೇ ವಿಶಿಷ್ಟವಾಗಿದೆ. ಹೊಕ್ಕಳ ಮೇಲ್ಭಾಗ ಮತ್ತು ಅದಕ್ಕೆ ಸಮನಾಗಿ ಬೆನ್ನ ಹಿಂದೆ ಕೂಡ ಅದೇ ಆಕಾರದ ಟ್ಯಾಟೂ ಇದೆ. ಸರ್ಚಿಂಗ್ ಫಾರ್ ಎ ಪರ್ಸನಾಲಿಟಿ ( @searchingforapersonality) ಎಂಬ ಟಿಕ್‌ಟಾಕ್ ಖಾತೆಯಲ್ಲಿ ಯುವತಿಯ ಟ್ಯಾಟೂ ಫೋಟೊ ಕಾಣಬಹುದಾಗಿದೆ.
ಯುವತಿಯು ತನ್ನ ದೇಹದ ಹಲವು ಕಡೆಗಳಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದು, ಅದರ ಮುಂದುವರಿದ ಭಾಗವಾಗಿ ಕ್ರಿಯಾಶೀಲವಾಗಿ ಹೊಕ್ಕಳ ಮೇಲ್ಭಾಗದಲ್ಲಿ ಕೂಡ ಟ್ಯಾಟೂ ಮೂಡಿಸಿಕೊಂಡೇ ಎಂದಿದ್ದಾರೆ. ಆದರೆ ನೆಟ್ಟಿಗರ ಪ್ರಕಾರ ಇದು ಯುವತಿಯ ಐಡಿಯಾ ಅಲ್ಲ. ಆಕೆ ಜಪಾನಿ ಅನಿಮೇಷನ್ ಸರಣಿ ಬ್ಲೀಚ್‌ನಿಂದ ಟ್ಯಾಟೂ ವಿನ್ಯಾಸ ಕದ್ದಿದ್ದಾಳೆ.
ನೂರಿಯುಕಿ ಅಬೆ ನಿರ್ದೇಶನದ ಬ್ಲೀಚ್ ಸರಣಿ ಬಹಳ ಜನಪ್ರಿಯ. 2004 ರಿಂದ 2012ರವರೆಗೆ ಜಪಾನ್‌ನಲ್ಲಿ ಬಹಳ ಪ್ರಸಿದ್ಧ ಪಡೆದಿದ್ದ ಟಿವಿ ಸರಣಿಯಲ್ಲಿ ಪಾತ್ರವೊಂದು ಇದೇ ಮಾದರಿಯ ಟ್ಯಾಟೂ ವಿನ್ಯಾಸ ಧರಿಸಿತ್ತು.
ವಿಡಿಯೋ: ಅಲ್ಲು ಅರ್ಜುನ್‌ರ ಶ್ರೀವಲ್ಲಿ ಸ್ಟೆಪ್ ಮರುಸೃಷ್ಟಿಸಿದ ಕೊರಿಯನ್ ಮಹಿಳೆ
ಹೊಕ್ಕಳ ಮೇಲ್ಭಾಗದಲ್ಲಿ ಟ್ಯಾಟೂ ಹಾಕಿಸಿಕೊಳ್ಳುವಾಗ ಬಹಳ ಕಷ್ಟವಾಯಿತು. ಜೀವವೇ ಹೋಗುತ್ತದೆ ಎನ್ನುವಷ್ಟು ನೋವಾಯ್ತು. ಆದರೂ ವಿಶಿಷ್ಟ ವಿನ್ಯಾಸಕ್ಕಾಗಿ ನೋವನ್ನು ತಡೆದುಕೊಂಡು, ಅಂದವಾಗಿ ಟ್ಯಾಟೂ ಮೂಡಿಬರಲಿ ಎಂದು ತಾಳ್ಮೆ ವಹಿಸಿದೆ ಎಂದು ಯುವತಿ ಟಿಕ್‌ಟಾಕ್‌ನಲ್ಲಿ ಹೇಳಿಕೊಂಡಿದ್ದಾಳೆ.