ಸಾಮಾಜಿಕ ಜಾಲತಾಣದಲ್ಲಿ ನಿತ್ಯವೂ ಲಕ್ಷಾಂತರ ಕಿರು ವಿಡಿಯೋಗಳು ಶೇರ್ ಆಗುತ್ತವೆ. ಅವುಗಳಲ್ಲಿ ಕೆಲವು ನಕ್ಕು ನಗಿಸಿದರೆ, ಕೆಲವೊಂದು ಕಣ್ಣೀರು ಹಾಕುವಂತೆ ಮಾಡುತ್ತದೆ. ಅಂಥದ್ದೇ ಒಂದು ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು, ಬಾಲಕನಿಗೆ ಅಜ್ಜ ಕೊಟ್ಟ ಸರ್ಪ್ರೈಸ್ ಇದು ಒಳಗೊಂಡಿದೆ.
33 ಸೆಕೆಂಡ್ಗಳ ಈ ವಿಡಿಯೋ ಅನ್ನು ಇನ್ಸ್ಟಾಗ್ರಾಮ್ ಬಳಕೆದಾರ ಎಬಿಟಾಪಿಯಾ ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಹಲವರು ಭಾವುಕರಾಗಿದ್ದಾರೆ.
ಈ ವಿಡಿಯೋದಲ್ಲಿ ಬಾಲಕನೊಬ್ಬ ಆಟದಲ್ಲಿ ನಿರತನಾಗಿರುವುದನ್ನು ನೋಡಬಹುದು. ಈ ನಿರ್ದಿಷ್ಟ ಕ್ಷಣವನ್ನು ಫುಟ್ಬಾಲ್ ಮೈದಾನದಲ್ಲಿ ದಾಖಲು ಮಾಡಲಾಗಿದೆ. ಬಾಲಕನನ್ನು ಅಚ್ಚರಿಗೊಳಿಸಲು ಆತನ ಅಜ್ಜ, ಅವನ ಬಳಿ ಬರುತ್ತಾನೆ. ಸರ್ಪ್ರೈಸ್ ಆಗಿ ಬರಬೇಕು ಎಂದು ಅಜ್ಜ ಅಂದುಕೊಂಡಿರುತ್ತಾನೆ. ಆದರೆ ಅದು ಸಾಧ್ಯವಾಗುವುದಿಲ್ಲ. ಏಕೆಂದರೆ ದೂರದಿಂದಲೇ ಮೊಮ್ಮಗ ಅಜ್ಜನನ್ನು ನೋಡುತ್ತಾನೆ.
ಅಜ್ಜನನ್ನು ನೋಡಿದ್ದೇ ತಕ್ಷಣ ಓಡಿಬಂದು ಆತನನ್ನು ಅಪ್ಪುತ್ತಾನೆ. ಇಬ್ಬರೂ ಆನಂದಬಾಷ್ಪ ಹರಿಸುತ್ತಾರೆ. ಅಜ್ಜ ಮತ್ತು ಮೊಮ್ಮಗನ ಈ ಕ್ಷಣ ನೋಡಿ ಹಲವು ಕಮೆಂಟಿಗರು ತಮ್ಮ ಅಜ್ಜನನ್ನು ನೆನಪಿಸಿಕೊಂಡಿದ್ದಾರೆ. ತಾವೂ ಭಾವುಕರಾಗಿರುವ ಬಗ್ಗೆ ಹೇಳಿದ್ದಾರೆ.