
ದುಡ್ಡು ಕೊಟ್ಟು ತಂದ ಹಾಲು ಒಡೆದು ಹೋದರೆ ಚೆಲ್ಲಬೇಡಿ. ಇದರಿಂದ ಹಲವಾರು ಪ್ರಯೋಜನಗಳಿವೆ. ಹಾಲು ಒಡೆದರೂ ಎಲ್ಲದರಲ್ಲೂ ಬಹಳಷ್ಟು ಪೋಷಕಾಂಶಗಳು ಇರುತ್ತವೆ. ಒಡೆದ ಹಾಲಿನಲ್ಲಿ ಪ್ರೋಟಿನ್ ಪ್ರಮಾಣವು ಹೆಚ್ಚಿರುತ್ತದೆ.
ಹಿಟ್ಟು ಮೃದುವಾಗಲು ಇದು ಸಹಾಯ ಮಾಡುತ್ತದೆ. ನೀವು ಚಪಾತಿ ರೊಟ್ಟಿಯ ಹಿಟ್ಟನ್ನು ಕಲೆಸುವಾಗ ಒಡೆದ ಹಾಲನ್ನು ಬಳಸುವುದರಿಂದ ಅದು ಮೃದುವಾಗುತ್ತದೆ ಮಾತ್ರವಲ್ಲ ರುಚಿಯೂ ಹೆಚ್ಚಾಗುತ್ತದೆ.
ಇದು ಮುಖದ ಸೌಂದರ್ಯಕ್ಕೂ ಉಪಯುಕ್ತ. ಒಡೆದ ಹಾಲಿನ ನೀರಿಗೆ ಕಡಲೆ ಹಿಟ್ಟು, ಅರಿಶಿಣ ಮತ್ತು ಗಂಧದ ಪುಡಿ ಸೇರಿಸಿ ನಿಮ್ಮ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
ಒಂದು ಪಾತ್ರೆಗೆ ಒಡೆದ ಹಾಲನ್ನು ಹಾಕಿ, ಸಕ್ಕರೆಯನ್ನು ಹಾಕಿ, ನೀರು ಆರುವವರೆಗೆ ಅದನ್ನು ಬಿಸಿ ಮಾಡಿ ಕೊನೆಯಲ್ಲಿ ಉಳಿಯುವ ಕಣಕದಿಂದ ರಸಗುಲ್ಲ ಅಥವಾ ಬರ್ಫಿ ತಯಾರಿಸಬಹುದು.
ಒಡೆದ ಹಾಲನ್ನು ಸ್ವಚ್ಚವಾದ ಬಟ್ಟೆಯಲ್ಲಿ ಕಟ್ಟಿಡಿ. ಕೆಲವು ಗಂಟೆಗಳಲ್ಲಿ ಪನ್ನೀರು ಸಿದ್ಧವಾಗುತ್ತದೆ. ಒಡೆದ ಹಾಲಿನಿಂದ ಮೊಸರು ತಯಾರಿಸಬಹುದು.