ತೂಕ ಇಳಿಕೆಗೆ ಸಹಾಯವಾಗಲೆಂದು ಕುಡಿಯುವ ಗ್ರೀನ್ ಟೀಯಲ್ಲಿರುವ ಸಂಯುಕ್ತಗಳು ಕ್ಯಾನ್ಸರ್ ವಿರುದ್ಧದ ಪ್ರೋಟಿನ್ಗಳನ್ನ ದೇಹದಲ್ಲಿ ಅಭಿವೃದ್ಧಿಪಡಿಸಲು ಸಹಾಯಕಾರಿ ಎಂದು ಅಧ್ಯಯನವೊಂದು ಹೇಳಿದೆ. ಗ್ರೀನ್ ಟೀಯಲ್ಲಿರುವ ಅಂಶಗಳು ಡಿಎನ್ಎ ದೋಷವನ್ನ ಸರಿಪಡಿಸೋದು ಮಾತ್ರವಲ್ಲದೇ ಕ್ಯಾನ್ಸರ್ ಕೋಶಗಳನ್ನ ನಾಶ ಮಾಡುತ್ತದೆ ಎಂದು ತಿಳಿದು ಬಂದಿದೆ.
ಆಂಟಿ ಕ್ಯಾನ್ಸರ್ ಪ್ರೋಟಿನ್ ಪಿ 53 ಹಾಗೂ ಇಜಿಸಿಜಿಗಳು ಕ್ಯಾನ್ಸರ್ಗಳನ್ನ ನಾಶ ಮಾಡಲಿದೆ. ಪ್ರೋಟೀನ್ ಪಿ 53 ಹಾಗೂ ಡಿಎನ್ಎ ದುರಸ್ತಿ ಕಾರ್ಯವನ್ನ ಗ್ರೀನ್ ಟೀ ಮಾಡೋದ್ರಿಂದ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನ ನಾಶ ಮಾಡಲಿವೆ ಎಂದು ಸಂಶೋಧಕರು ಹೇಳಿದ್ದಾರೆ.