
ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಒಂದು ಕಣ್ಣು ಕಳೆದುಕೊಳ್ಳುವುದರ ಜೊತೆಗೆ ಲಿವರ್ ಗೂ ತೀವ್ರ ಹಾನಿಯಾಗಿದೆ ಎಂದು ಹೇಳಲಾಗಿದೆ. ಸಲ್ಮಾನ್ ರಶ್ದಿ ಅವರ ಮೇಲಿನ ಹಲ್ಲೆಯನ್ನು ‘ಹ್ಯಾರಿ ಪಾಟರ್’ ಖ್ಯಾತಿಯ ಬ್ರಿಟನ್ ಲೇಖಕಿ ಜೆ.ಕೆ. ರೌಲಿಂಗ್ ಖಂಡಿಸಿದ್ದು, ಈಗ ಅವರಿಗೂ ಕೊಲೆ ಬೆದರಿಕೆ ಹಾಕಲಾಗಿದೆ.
ಸಲ್ಮಾನ್ ರಶ್ದಿ ಅವರ ಮೇಲೆ ನಡೆದ ಹಲ್ಲೆ ಬಳಿಕ ಟ್ವೀಟ್ ಮಾಡಿದ್ದ ರೌಲಿಂಗ್, ಇದರಿಂದ ತಮಗೆ ತುಂಬಾ ಬೇಸರವಾಗಿದೆ. ಅವರು ಆದಷ್ಟು ಶೀಘ್ರವಾಗಿ ಗುಣಮುಖರಾಗಲಿ ಎಂದು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮೀರ್ ಆಸಿಫ್ ಅಜೀಜ್ ಎಂಬಾತ, ಯೋಚಿಸಬೇಡ ನೀನೇ ನಮ್ಮ ಮುಂದಿನ ಗುರಿ ಎಂದು ಟ್ವೀಟ್ ಮಾಡಿದ್ದಾನೆ.
ವಾಕ್ ಸ್ವಾತಂತ್ರ್ಯದ ರಾಯಭಾರಿಯಾಗಿರುವ ಜೆ.ಕೆ. ರೌಲಿಂಗ್ ತಮ್ಮ ಭಾಷಣಗಳಿಂದಾಗಿ ಧಾರ್ಮಿಕ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಅವರಿಗೆ ಕೊಲೆಯ ಬೆದರಿಕೆ ಬಂದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.