alex Certify 32 ರೂ. ಮೌಲ್ಯವಿದ್ದ ಈ ಹ್ಯಾರಿಪಾಟರ್​ ಪುಸ್ತಕ 11 ಲಕ್ಷ ರೂಪಾಯಿಗೆ ಮಾರಾಟ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

32 ರೂ. ಮೌಲ್ಯವಿದ್ದ ಈ ಹ್ಯಾರಿಪಾಟರ್​ ಪುಸ್ತಕ 11 ಲಕ್ಷ ರೂಪಾಯಿಗೆ ಮಾರಾಟ….!

1990 ಮತ್ತು 2000 ರ ದಶಕದ ಆರಂಭದಲ್ಲಿ ಬೆಳೆದವರ ಪಾಲಿಗೆ ಹ್ಯಾರಿ ಪಾಟರ್​ ಅವರ ಬಾಲ್ಯದ ನೆಚ್ಚಿನ ಹಿರೋ ಎಂದು ಹೇಳಿದರೆ ತಪ್ಪಾಗೋದಿಲ್ಲ. ಹ್ಯಾರಿ ಪಾಟರ್​ ಪುಸ್ತಕವನ್ನು ಬರೆದ ಲೇಖಕ ಜೆ ಕೆ ರೌಲಿಂಗ್ ಅವರು ಇಡೀ ಪೀಳಿಗೆಯ ಮಕ್ಕಳನ್ನು ಉತ್ಸಾಹಿ ಓದುಗರಾಗಿ ಪರಿವರ್ತಿಸಿದರು. ಈಗ ವಿಷಯ ಏನಂದ್ರೆ 1997 ರಲ್ಲಿ ಬ್ಲೂಮ್ಸ್‌ಬರಿ ಮುದ್ರಿಸಿದ 500 ಪ್ರತಿಗಳಲ್ಲಿ ಒಂದಾದ ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್‌ನ ಅಪರೂಪದ ಪ್ರತಿಯು ಹರಾಜಿನಲ್ಲಿ ಬರೋಬ್ಬರಿ 11 ಲಕ್ಷ ರೂ.ಗಳಿಗೆ ಮಾರಾಟವಾಗಿದೆ.

ಪ್ರಾರಂಭದಲ್ಲಿ ಮುದ್ರಿಸಿದ ಈ 500 ಪ್ರತಿಗಳಲ್ಲಿ 300 ಪ್ರತಿಗಳನ್ನು ಗ್ರಂಥಾಲಯಗಳಿಗೆ ಕಳುಹಿಸಲಾಗಿತ್ತು. ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿ ಹಾಕಿರುವ ಪೋಸ್ಟ್ ಗೆ ನನ್ನ ಮನೆಯಲ್ಲಿ ಇದೇ ಪುಸ್ತಕವಿದೆ ಎಂದು ಬಳಕೆದಾರರೊಬ್ಬರಯ ಕಮೆಂಟ್ ಮಾಡಿದ್ದಾರೆ. ಇದಕ್ಕೆ ಈ ಪುಸ್ತಕದ ಅಪರೂಪದ ಸಂಗತಿ ಏನು ಎಂದು ಇನ್ನೊಬ್ಬರು ಕೇಳಿದ್ದಾರೆ‌.

ಪುಸ್ತಕವು ಮೊದಲು ಬಿಡುಗಡೆಯಾದಾಗ ಪ್ರಕಾಶಕರು ಅದು ಜನಪ್ರಿಯವಾಗುತ್ತದೆ ಎಂದು ಭಾವಿಸಲಿಲ್ಲ. ಆದ್ದರಿಂದ ಅವರು 500 ಪ್ರತಿಗಳನ್ನು ಮಾತ್ರ ಮುದ್ರಿಸಿದ್ದರು. ಅವುಗಳಲ್ಲಿ ಇನ್ನೂರು ಮಾರಾಟವಾದವು ಮತ್ತು ಇತರ ಮುನ್ನೂರು ಪುಸ್ತಕಗಳನ್ನು ಗ್ರಂಥಾಲಯಗಳಿಗೆ ನೀಡಲಾಯಿತು. ಈ ಮೂಲಕ ಓದುಗರನ್ನು ಹೆಚ್ಚಿಸಿ ಮತ್ತು ಬಾಯಿ ಮಾತಿನ ಮೂಲಕ ಜನಪ್ರಿಯತೆ ಹರಡಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...