alex Certify BIG NEWS: ಹುಬ್ಬಳ್ಳಿಯ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ʼಗಿನ್ನಿಸ್‌ʼ ದಾಖಲೆಗೆ ಸೇರ್ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹುಬ್ಬಳ್ಳಿಯ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ʼಗಿನ್ನಿಸ್‌ʼ ದಾಖಲೆಗೆ ಸೇರ್ಪಡೆ

ಹುಬ್ಬಳ್ಳಿ: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಅನ್ನು ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಇದರ ಕುರಿತು ಈಗ ರೈಲ್ವೆ ಇಲಾಖೆ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದೆ.

ವಿಶ್ವ ದಾಖಲೆಯನ್ನು ಸಾಧಿಸಿದ ಹೆಮ್ಮೆ ಇದಾಗಿದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ. ಈ ಪ್ಲಾಟ್‌ಫಾರ್ಮ್ 185 ಮೀ/1507 ಮೀ ಜಾಗವನ್ನು ಆಕ್ರಮಿಸಿಕೊಂಡಿದೆ. ಛಾಯಾಚಿತ್ರವನ್ನು ಟ್ವಿಟ್ಟರ್ ಬಳಕೆದಾರ ಸಂದೀಪ್ ಬಾಯಾರಿ ಅವರು ಹಂಚಿಕೊಂಡಿದ್ದಾರೆ, “ಹೆಮ್ಮೆಯ ಕ್ಷಣ” ಎಂದು ಶೇರ್​ ಮಾಡಿದ್ದಾರೆ.

ನವೆಂಬರ್ 2019 ರಲ್ಲಿ ಪ್ರಾರಂಭವಾದ ಹುಬ್ಬಳ್ಳಿ ಮತ್ತು ಬೆಂಗಳೂರು ನಡುವಿನ ರೈಲ್ವೆ ಫ್ಲಾಟ್​ಫಾರ್ಮ್​ ಇದಾಗಿದೆ. ಉತ್ತರ ಪ್ರದೇಶದ ಗೋರಖ್‌ಪುರ ರೈಲು ನಿಲ್ದಾಣ (1336 ಮೀ) ಈ ಹಿಂದೆ ಅತಿ ಉದ್ದದ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿರುವ ನಿಲ್ದಾಣಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಕೇರಳದ ಕೊಲ್ಲಂ ಜಂಕ್ಷನ್ (1180 ಮೀ) ನಂತರದ ಸ್ಥಾನದಲ್ಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...