alex Certify ‘ರಕ್ಷಾ ಬಂಧನ’ ಪ್ರಯುಕ್ತ ಯೋಗಿ ಸರ್ಕಾರದಿಂದ ಮಹಿಳೆಯರಿಗೆ ಬಂಪರ್ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರಕ್ಷಾ ಬಂಧನ’ ಪ್ರಯುಕ್ತ ಯೋಗಿ ಸರ್ಕಾರದಿಂದ ಮಹಿಳೆಯರಿಗೆ ಬಂಪರ್ ಆಫರ್

‘ರಕ್ಷಾ ಬಂಧನ’ ಸಹೋದರ – ಸಹೋದರಿಯರಿಗೆ ಒಂದು ಸಂಭ್ರಮದ ಹಬ್ಬ. ತನ್ನ ಸಹೋದರನಿಗೆ ಸಹೋದರಿ ತಿಲಕವಿಟ್ಟು ರಾಕಿ ಕಟ್ಟಿದರೆ, ಸಹೋದರ ನಿನ್ನ ರಕ್ಷಣೆ ನನ್ನ ಹೊಣೆ ಎಂದು ಅಭಯ ನೀಡಿ ಕಾಣಿಕೆ ನೀಡುತ್ತಾನೆ. ಇಂತಹ ಮಹತ್ವದ ಆಚರಣೆ ದಿನದಂದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮಹಿಳೆಯರಿಗೆ ಬಂಪರ್ ಆಫರ್ ನೀಡಿದೆ.

ಹೌದು ಆಗಸ್ಟ್ 10 ರ ಮಧ್ಯರಾತ್ರಿಯಿಂದ ಆಗಸ್ಟ್ 12ರ ಮಧ್ಯರಾತ್ರಿಯವರೆಗೆ ಅಂದರೆ 48 ಗಂಟೆಗಳ ಕಾಲ ಮಹಿಳೆಯರು ಉತ್ತರ ಪ್ರದೇಶ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈ ಕುರಿತಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಡೆಯುತ್ತಿರುವ ಸಂದರ್ಭದಲ್ಲಿ ಮನೆಮನೆಗಳಲ್ಲಿ ರಾಷ್ಟ್ರಧ್ವಜ ಅಭಿಯಾನ ನಡೆಯುತ್ತಿರುವ ಮಧ್ಯೆ, ಉತ್ತರ ಪ್ರದೇಶ ಸರ್ಕಾರ ರಕ್ಷಾ ಬಂಧನಕ್ಕೆ ಮಹಿಳೆಯರಿಗೆ ಈ ಬಂಪರ್ ಆಫರ್ ನೀಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...