alex Certify ಹನಿಸಿಂಗ್​ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪತ್ನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹನಿಸಿಂಗ್​ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪತ್ನಿ..!

ಬಾಲಿವುಡ್​​ ರ್ಯಾಪರ್​​ ಯೋ ಯೋ ಹನಿ ಸಿಂಗ್​​ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಯೋ ಯೋ ಹನಿ ಸಿಂಗ್​ ಪತ್ನಿ ಶಾಲಿನಿ ತಲ್ವಾರ್​ ದೆಹಲಿಯ ತೀಸ್​​ ಹಜಾರಿ ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಸಂಬಂಧ ಕೋರ್ಟ್ ಯೋ ಯೋ ಹನಿ ಸಿಂಗ್​​ಗೆ ನೋಟಿಸ್​ ಕಳುಹಿಸಿದ್ದು, ಆಗಸ್ಟ್​ 28ರೊಳಗಾಗಿ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ತಲ್ವಾರ್​ ದಾಖಲಿಸಿರುವ ಪ್ರಕರಣದಲ್ಲಿ ತಮಗೆ ಪತಿಯಿಂದ ದೈಹಿಕವಾಗಿ, ಮಾನಸಿಕವಾಗಿ ಹಲ್ಲೆ ಉಂಟಾಗಿದೆ ಎಂದು ಉಲ್ಲೇಖಿಸಲಾಗಿದೆ. ಹನಿ ಸಿಂಗ್​ ತಮ್ಮ ವೇತನವನ್ನು ನಗದು ರೂಪದಲ್ಲಿ ಪಡೆಯುತ್ತಿದ್ದರು. ಆದರೆ ತಮ್ಮ ವೈಯಕ್ತಿಕ ಖರ್ಚಿಗೆ ಅದನ್ನು ಬಳಕೆ ಮಾಡಲು ನೀಡುತ್ತಿರಲಿಲ್ಲ. ತಮ್ಮ ಹಾಡು, ಸಂಗೀತ ಪ್ರದರ್ಶನ ಹಾಗೂ ರಾಯಧನದ ಮೂಲಕ ಹನಿ ಸಿಂಗ್​ ತಿಂಗಳಿಗೆ 4 ಕೋಟಿ ರೂಪಾಯಿ ಸಂಪಾದಿಸುತ್ತಾರೆ.

ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ 10 ಹುದ್ದೆಗಳು ರದ್ದು

ಅವರು ಮದ್ಯ, ಡ್ರಗ್ಸ್ ಸೇವನೆ ಮಾಡುತ್ತಾರೆ. ಹನಿ ಸಿಂಗ್​ ಒಬ್ಬ ದುರಹಂಕಾರಿ ಮಾತ್ರವಲ್ಲದೇ ಅನೇಕ ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ಪಂಜಾಬಿ ನಟಿಯೊಂದಿಗೆ ಹನಿ ಸಿಂಗ್ ಅಕ್ರಮ ಸಂಬಂಧ ಬೆಳಕಿಗೆ ಬಂದ ಬಳಿಕ ಹನಿ ಸಿಂಗ್​ ಇನ್ಮೇಲೆ ಇಂತಹ ತಪ್ಪು ಮಾಡೋದಿಲ್ಲ ಎಂದು ಪ್ರಮಾಣ ಮಾಡಿದ್ದ ಎಂದು ತಲ್ವಾರ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಈ ಆರೋಪಗಳ ವಿಚಾರವಾಗಿ ಹನಿಸಿಂಗ್​ ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಯೋ ಯೋ ಹನಿಸಿಂಗ್​ 2011ರ ಜನವರಿ 23ರಂದು ಶಾಲಿನಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದಕ್ಕೂ ಮುನ್ನ ಇವರಿಬ್ಬರು ರಹಸ್ಯವಾಗಿ 2 ವರ್ಷಗಳ ಕಾಲ ಡೇಟಿಂಗ್​ ಕೂಡ ಮಾಡಿದ್ದರು. ಹನಿಸಿಂಗ್​ ಎಲ್ಲಿಯೂ ಕೂಡ ತಾನು ವಿವಾಹಿತ ಎಂದು ಹೇಳಿಕೊಳ್ಳುತ್ತಿರಲಿಲ್ಲ ಎಂದೂ ತಲ್ವಾರ್​ ಆರೋಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...