
ಯೆಜ್ಡಿಯನ್ನು ಎರಡು ಹೊಸ ಮಾಡೆಲ್ಗಳಲ್ಲಿ ಬಿಡುಗಡೆ ಮಾಡಲು ಕ್ಲಾಸಿಕ್ ಲೆಜೆಂಡ್ಸ್ ಮುಂದಾಗಿದೆ. ಸಾಹಸ ಮತ್ತು ಸ್ಕ್ರಾಂಬ್ಲರ್ ಎಂಬ ವರ್ಗಗಳ ಅಡಿಯಲ್ಲಿ ಈ ಬೈಕುಗಳನ್ನು ಕ್ಲಾಸಿಕ್ ಲೆಜೆಂಡ್ಸ್ ಪರಿಚಯಿಸಲಿದೆ.
ಜನವರಿ 13ರಂದು ಬಿಡುಗಡೆಯಾಗಲಿರುವ ಯೆಜ್ಡಿಯ ಟೀಸರ್ಗಳನ್ನು ಅದಾಗಲೇ ಕ್ಲಾಸಿಕ್ ಲೆಜೆಂಡ್ಸ್ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ. ಟೀಸರ್ನಲ್ಲಿ ಸ್ಕ್ರಾಂಬ್ಲರ್ ಯೆಜ್ಡಿ ಇದ್ದು, ಅಡ್ವೆಂಚರ್ ಆವೃತ್ತಿಯನ್ನು ನಂತರದ ದಿನಗಳಲ್ಲಿ ಪರಿಚಯಿಸುವ ನಿರೀಕ್ಷೆ ಇದೆ.
ಕಡಲ ತೀರದ ಪ್ರದೇಶವೊಂದರಲ್ಲಿ ಹೊಸ ಯೆಜ್ಡಿಯ ಲುಕ್ಗಳನ್ನು ಪರಿಚಯಿಸಲಾಗಿದೆ. ವೈರ್-ಸ್ಪೋಕ್ ಚಕ್ರಗಳು ಮತ್ತು ಡ್ಯುಯಲ್ ಕ್ರೋಮ್ ಎಕ್ಸಾಸ್ಟ್ಗಳನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.