ದೇಶದ ಎಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆ ದಿನೇ ದಿನೇ ವ್ಯಾಪಿಸುತ್ತಿದ್ದು, ಹೊಸ ಮಾಡೆಲ್‌ಗಳ ಸುದ್ದಿಗಳು ವರದಿಯಾಗುತ್ತಲೇ ಇರುತ್ತೇವೆ.
ಇದೀಗ ಎಲೆಕ್ಟ್ರಿಕ್ ಕಾರುಗಳಲ್ಲೂ ಸಹ ಐಷಾರಾಮಿ ಆಯ್ಕೆಗಳು ಬರಲು ಆರಂಭಿಸಿವೆ. ಅವುಗಳ ಪೈಕಿ ಕೆಲವೊಂದು ಟಾಪ್ ಮಾಡೆಲ್‌ಗಳ ವಿವರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.
ಬಿಎಂಡಬ್ಲ್ಯೂ ಐಎಕ್ಸ್
ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಎಸ್‌ಯುವಿ ಐಎಕ್ಸ್ ಬಿಡುಗಡೆ ಮಾಡಿರುವ ಬಿಎಂಡಬ್ಲ್ಯೂ, ಮರ್ಸಿಡಿಸ್ ಜೆಂಜ಼್ ಇಕ್ಯೂಸಿ ಮತ್ತು ಆಡಿ ಇ-ಟ್ರಾನ್ ಎಸ್‌ಯುವಿಗಳೊಂದಿಗೆ ಪೈಪೋಟಿ ಮಾಡಬೇಕಿದೆ. ಬಿಎಂಡಬ್ಲ್ಯೂನ ಫ್ಲಾಗ್‌ಶಿಪ್ ಮಾಡೆಲ್ ಆಗಿರುವ ಈ ಕಾರು ಒಮ್ಮೆ ಚಾರ್ಜ್ ಮಾಡಿದರೆ 611 ಕಿಮೀಗಳಷ್ಟು ದೂರ ಸಾಗಬಲ್ಲದು.
ಕಾರಿನಲ್ಲಿ ಸಿಗುವ ವೈಶಿಷ್ಟ್ಯವನ್ನು ಸ್ಕೂಟರ್ ಗೆ ನೀಡಿ ಗಮನ ಸೆಳೆದ ಹೀರೋ
ಮುಂದಿನ ಆರು ತಿಂಗಳಲ್ಲಿ ಭಾರತದಲ್ಲಿ ಬಿಎಂಡಬ್ಲ್ಯೂ ಲಾಂಚ್ ಮಾಡಲು ಉದ್ದೇಶಿಸಿರುವ ಮೂರು ಇವಿ ಕಾರುಗಳಲ್ಲಿ ಐಎಕ್ಸ್ ಎಸ್‌ಯುವಿ ಮೊದಲನೆಯದ್ದಾಗಿದೆ. ಎರಡನೆಯದ್ದಾದ ಮಿನಿ ಕೂಪರ್ ಎಸ್‌ಇ ಮಾರ್ಚ್ 2022ಕ್ಕೆ ಮಾರಾಟಕ್ಕೆ ಬರಲಿದೆ. ಮೂರನೇ ಇವಿಯಾದ ಐ4 ಲಕ್ಸುರಿ ಎಲೆಕ್ಟ್ರಿಕ್ ಸೆಡಾನ್ ಜೂನ್ 2022ರಲ್ಲಿ ಆಗಮಿಸುವ ನಿರೀಕ್ಷೆ ಇದೆ.
ಸದ್ಯಕ್ಕೆ ಐಎಕ್ಸ್‌ನ ಎಕ್ಸ್‌ಡ್ರೈವ್40 ಮಾಡೆಲ್ ಮಾತ್ರವೇ ಭಾರತಕ್ಕೆ ಬರಲಿದೆ. ದೇಶಾದ್ಯಂತ ಇರುವ ಬಿಎಂಡಬ್ಲ್ಯೂ ಡೀಲರ್‌ಶಿಪ್‌ಗಳ ಬಳಿ ಈ ಎಸ್‌ಯುವಿಗೆ ಬುಕಿಂಗ್ ಲಭ್ಯವಿದೆ.
ಈ ಬಿಎಂಡಬ್ಲ್ಯೂನ ಎಸ್‌ಯುವಿಯಲ್ಲಿ, ಬ್ರಾಂಡ್‌ನ ಐದನೇ ತಲೆಮಾರಿನ ಎಲೆಕ್ಟ್ರಿಕ್ ಪವರ್‌ಟ್ರೇನ್ ಇದ್ದು, ಪ್ರತಿಯೊಂದು ಆಕ್ಸೆಲ್ ಮೇಲೆ ಒಂದು ಎಲೆಕ್ಟ್ರಿಕ್ ಮೋಟರ್‌ಗಳು ಇರಲಿದ್ದು, ಎಲೆಕ್ಟ್ರಿಕ್ ಆಲ್-ವೀಲ್-ಡ್ರೈವ್ ಕಾರ್ಯಾಚರಣೆಗೆ ಅನುವಾಗಲಿದೆ. 76.6 ಕೆಡಬ್ಲ್ಯೂಎಚ್ ಬ್ಯಾಟರಿ ಹೊಂದಿರುವ ಈ ಎಸ್‌ಯುವಿಯಲ್ಲಿ 240ಕಿವ್ಯಾ ಆಥವಾ 322ಬಿಎಚ್‌ಪಿ ಮತ್ತು 630ಎನ್‌ಎಂನಷ್ಟು ಗರಿಷ್ಠ ಟಾರ್ಕ್ ಉತ್ಪಾದನೆಯಾಗಲಿದೆ. ಈ ಎಸ್‌ಯುವಿ ಒಂದು ಚಾರ್ಜ್‌ಗೆ 425ಕಿಮೀ ಮೈಲೇಜ್ ನೀಡಲಿದ ಎಂದು ಹೇಳಲಾಗಿದೆ.
ನಕಲಿ ಸ್ಟೂಡೆಂಟ್ ವೀಸಾ ಪಡೆದು ಲಂಡನ್ ಗೆ ತೆರಳಲು ಯತ್ನ, ಸೇಲ್ಸ್ ಮ್ಯಾನ್ ಅರೆಸ್ಟ್
ಮೂರು ಚಾರ್ಜಿಂಗ್ ಆಯ್ಕೆಗಳನ್ನು ಬಿಎಂಡಬ್ಲ್ಯೂ ಇಂಡಿಯಾ ನೀಡುತ್ತಿದೆ — 2.3ಕಿವ್ಯಾ ಸ್ಟಾಂಡರ್ಡ್ ಚಾರ್ಜಿಂಗ್ ಕೇಬಲ್, 7.4ಕಿವ್ಯಾ 1-ಫೇಸ್ ವಾಲ್‌ಬಾಕ್ಸ್ ಚಾರ್ಜರ್, 11ಕಿವ್ಯಾ 3-ಫೇಸ್ ವಾಲ್‌ಬಾಕ್ಸ್ ಚಾರ್ಜರ್‌ಗಳನ್ನು ನೀಡಲಾಗಿದೆ. ಚಾರ್ಜರ್‌ಗಳ ಕ್ಷಮತೆಯ ಆಧಾರದ ಮೇಲೆ ಬ್ಯಾಟರಿಯ ಒಂದು ಸುತ್ತಿನ ಚಾರ್ಜ್ ಪೂರ್ಣಗೊಳ್ಳಲು 7.25-36 ಗಂಟೆಗಳು ಹಿಡಿಯುತ್ತವೆ.
ಇಂಟಿರಿಯರ್ ಕ್ಯಾಬಿನ್‌ನಲ್ಲಿ ಬಿಎಂಡಬ್ಲ್ಯೂನ ಪ್ರೀಮಿಯಂ ಎಸ್‌ಯುವಿಗಳಲ್ಲಿರುವ ಎಲ್ಲಾ ಅತ್ಯಾಧುನಿಕ ಫೀಚರ್‌ಗಳನ್ನು ನೀಡಲಾಗಿದೆ.
ಪೋರ್ಶೆ ಟೇಕಾನ್
ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಟೇಕಾನ್‌ಗೆ ಚಾಲನೆ ನೀಡಿರುವ ಪೋರ್ಶೆ, ಇದರ ಬೆಲೆಯನ್ನು 1.5 ಕೋಟಿ ರೂ. (ಎಕ್ಸ್ ಶೋರೂ) ಇಟ್ಟಿದೆ. ಭಾರತದಲ್ಲಿ ಟೇಕಾನ್‌ನ ಕ್ರಾಸ್ ಟೂರಿಸ್ಮೋ ವರ್ಶನ್‌ಗಳನ್ನು ಪೋರ್ಶೆ ಬಿಡುಗಡೆ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಪೋರ್ಶೆ ಉತ್ಪಾದಿತ ಮೊದಲ ಎಲೆಕ್ಟ್ರಿಕ್ ಕಾರು ಇದಾಗಿದೆ. ಬಿಡುಗಡೆಯಾದ ಒಂಬತ್ತು ತಿಂಗಳ ಅವಧಿಯಲ್ಲಿ ಈ ಕಾರಿನ 28,640 ಘಟಕಗಳನ್ನು ಅನೇಕ ದೇಶಗಳಲ್ಲಿ ಪೋರ್ಶೆ ಮಾರಾಟ ಮಾಡಿದೆ.
ಒಮ್ಮೆ ಬ್ಯಾಟರಿಯನ್ನು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದಲ್ಲಿ, ಈ ಕಾರು 500ಕಿಮೀನಷ್ಟು ದೂರ ಕ್ರಮಿಸಬಲ್ಲದಾಗಿದೆ.
ಆಡಿ ಇ-ಟ್ರಾನ್/ಆರ್‌ಎಸ್ ಇ-ಟ್ರಾನ್ ಜಿಟಿ
ಜರ್ಮನಿಯ ಐಷಾರಾಮಿ ಕಾರು ಉತ್ಪಾದಕ ಆಡಿ, ತನ್ನ ಆಡಿ ಇ-ಟ್ರಾನ್/ಆರ್‌ಎಸ್ ಇ-ಟ್ರಾನ್ ಜಿಟಿ ಮತ್ತು ಆಡಿ ಆರ್‌ಎಸ್ ಇ-ಟ್ರಾನ್ ಜಿಟಿಗಳ ಮೂಲಕ ಭಾರತದಲ್ಲಿ ಹೊಸ ರೇಂಜ್‌ಗೆ ಚಾಲನೆ ನೀಡಿದೆ. ಇ-ಟ್ರಾನ್ ಜಿಟಿಯ ಬೆಲೆ 1,79,90,000 ರೂ.ಗಳಾಗಿದ್ದರೆ, ಆರ್‌ಎಸ್ ಇ-ಟ್ರಾನ್ ಜಿಟಿಯ ಬೆಲೆ 2,04,99,000 ರೂ.ಗಳಷ್ಟಿದೆ. ಈ ಕಾರುಗಳು ಭಾರತದಲ್ಲಿ ಅದಾಗಲೇ ಚಾಲ್ತಿಯಲ್ಲಿರುವ ಇ-ಟ್ರಾನ್ ಮತ್ತು ಇ-ಟ್ರಾನ್ ಸ್ಪೋರ್ಟ್‌ಬ್ಯಾಕ್ ಮಾಡೆಲ್‌ಗಳನ್ನು ಕೂಡಿಕೊಂಡಿದ್ದು, ಇಷ್ಟು ಮಾಡೆಲ್‌ಗಳನ್ನು ದೇಶದಲ್ಲಿ ಬಿಡುಗಡೆ ಮಾಡಿದ ಏಕೈಕ ಕಂಪನಿ ಆಡಿ ಆಗಿದೆ.
ಎರಡೂ ಕಾರುಗಳು ಲಿಥಿಯಂ-ಐಯಾನ್ ಬ್ಯಾಟರಿಗಳ ಬಲದಿಂದ ಓಡಬಲ್ಲವಾಗಿದ್ದು, ಒಂದು ಪೂರ್ಣ ಚಾರ್ಜ್‌ಗೆ 388 ಕಿಮೀ-500ಕಿಮೀನಷ್ಟು ಮೈಲೇಜ್ ನೀಡಬಲ್ಲವು.
ಇನ್ನು ಆಡಿಯ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ವಿಚಾರಕ್ಕೆ ಬರುವುದಾದರೆ — ಕೋವಿಡ್ ಲಾಕ್‌ಡೌನ್ ಕಾರಣದಿಂದ ಸ್ವಲ್ಪ ತಡವಾಗಿ ಬಿಡುಗಡೆಯಾದ ಇ-ಟ್ರಾನ್ 50ಯ ಬೆಲೆಯು 99,99,000ರೂ. (ಎಕ್ಸ್ ಶೋರೂಂ) ಇದ್ದರೆ ಇ-ಟ್ರಾನ್ 55ನ ಬೆಲೆ 1,16,15,000 ರೂ.ಗಳಷ್ಟಿದೆ. ಆಡಿ ಇ-ಟ್ರಾನ್ ಸ್ಪೋರ್ಟ್‌ಬ್ಯಾಕ್ 55ನ ಬೆಲೆಯು 1,17,66,000 ರೂ.ಗಳಷ್ಟಿದೆ.
ಇ-ಟ್ರಾನ್ 55 ಮತ್ತು ಸ್ಪೋರ್ಟ್‌ಬ್ಯಾಕ್‌ಗಳ ಬ್ಯಾಟರಿಗಳು ಒಂದು ಪೂರ್ಣ ಚಾರ್ಜಿಂಗ್ ಮೇಲೆ 359-484ಕಿಮೀ ಚಲಿಸಿದರೆ, ಇ-ಟ್ರಾನ್ 50 ಕಾರಿನ ಬ್ಯಾಟರಿ ಒಮ್ಮೆ ಚಾರ್ಜ್ ಆದರೆ 264-379 ಕಿಮೀಗಳಷ್ಟು ದೂರ ಚಲಿಸಬಲ್ಲವು.
BIG NEWS: ಸಿದ್ದರಾಮಯ್ಯ ಕಾಲದಲ್ಲೇ ಬಿಲ್ ಗೆ ಸಿದ್ಧತೆ; ಬಿಜೆಪಿ ಹೇಳಿಕೆಗೆ ಸ್ಪಷ್ಟನೆ ನೀಡಿದ ವಿಪಕ್ಷ ನಾಯಕ
ಮರ್ಸಿಡಿಸ್ ಬೆಂಜ಼್ ಇಕ್ಯೂಸಿ
ದೇಶದಲ್ಲಿ ಮೊದಲಿಗೆ ಲಾಂಚ್ ಆದ ಎಲೆಕ್ಟ್ರಿಕ್ ಎಸ್‌ಯುವಿ ಆಗಿರುವ ಮರ್ಸಿಡಿಸ್ ಬೆಂಜ಼್ ಇಕ್ಯೂಸಿಯ ಬೆಲೆಯು ಒಂದು ಕೋಟಿ ರೂ.ಗಳಷ್ಟಿದೆ. ಒಮ್ಮೆ ಚಾರ್ಜ್ ಮಾಡಿದರೆ 450ಕಿಮೀ ದೂರ ಚಲಿಸಬಲ್ಲ ಇಕ್ಯೂಸಿ, 400ಬಿಚ್‌ಪಿ ಮತ್ತು 760ಎನ್‌ಎಂ ಟಾರ್ಕ್ ಉತ್ಪಾದಿಸಬಲ್ಲ ಇಂಜಿನ್‌ನ ಬಲ ಹೊಂದಿದೆ.
ಇಕೋ, ಕಂಫರ್ಟ್, ಸ್ಪೋರ್ಟ್ ಮತ್ತು ಇಂಡಿವಿಶುವಲ್ ಎಂಬ ನಾಲ್ಕು ಭಿನ್ನ ಡ್ರೈವಿಂಗ್ ಮೋಡ್‌ಗಳಲ್ಲಿ ಬರುವ ಮರ್ಸಿಡಿಸ್ ಬೆಂಜ಼್ ಇಕ್ಯೂಸಿಯ ಬ್ಯಾಟರಿಯನ್ನು ಪೂರ್ತಿ ಚಾರ್ಜ್ ಮಾಡಲು 10 ಗಂಟೆಗಳ ಅವಧಿ ಬೇಕಾಗುತ್ತದೆ.
ಜಾಗ್ವರ್ ಐ-ಪೇಸ್
ಜಾಗ್ವರ್ ಐ-ಪೇಸ್‌ನ ಬೆಲೆಯು 1.06 ಕೋಟಿ ರೂ.ಗಳಷ್ಟಿದ್ದು, ಇದರ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ, 470ಕಿಮೀ ಮೈಲೇಜ್ ನೀಡಬಲ್ಲದಾಗಿದೆ.
7.4 ಕಿವ್ಯಾ ಎಸಿ ಚಾರ್ಜರ್ ಮೂಲಕ 14 ಗಂಟೆಗಳಲ್ಲಿ ಐ-ಪೇಸ್ ಕಾರಿನಲ್ಲಿರುವ ಲಿಥಿಯಂ-ಐಯಾನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ. 25ಕಿವ್ಯಾ ಡಿಸಿ ಚಾರ್ಜರ್ ಬಳಕೆ ಮಾಡಿದರೆ 4 ಗಂಟೆಗಳಲ್ಲಿ ಪೂರ್ಣ ಚಾರ್ಜಿಂಗ್ ಆಗಲಿದೆ.
ದೇಶದ 200ರಷ್ಟು ಜಾಗಗಳಲ್ಲಿ ಲಭ್ಯವಿರುವ ಟಾಟಾ ಪವರ್‌ನ 200ರಷ್ಟು ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಈ ಕಾರಿನ ಬ್ಯಾಟರಿಗಳನ್ನು ಚಾರ್ಜ್ ಮಾಡಿಕೊಳ್ಳಬಹುದಾಗಿದೆ.