alex Certify ಕಾರಿನಲ್ಲಿ ಸಿಗುವ ವೈಶಿಷ್ಟ್ಯವನ್ನು ಸ್ಕೂಟರ್ ಗೆ ನೀಡಿ ಗಮನ ಸೆಳೆದ ಹೀರೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನಲ್ಲಿ ಸಿಗುವ ವೈಶಿಷ್ಟ್ಯವನ್ನು ಸ್ಕೂಟರ್ ಗೆ ನೀಡಿ ಗಮನ ಸೆಳೆದ ಹೀರೋ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡ್ತಿವೆ. ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿ ಹೀರೋ ಮೋಟೋಕಾರ್ಪ್‌ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ಕಂಪನಿ ಎಲೆಕ್ಟ್ರಿಕ್ ವಿಭಾಗದಲ್ಲಿ ಹೀರೋ ಆಪ್ಟಿಮಾ ಎಚ್‌ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ.

ಆಪ್ಟಿಮಾ ಎಚ್‌ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್, ಕ್ರೂಸ್ ಕಂಟ್ರೋಲ್‌ನೊಂದಿಗೆ ಲಭ್ಯವಾಗಲಿದೆ. ಈ ಕ್ರೂಸ್ ಕಂಟ್ರೋಲ್ ಸವಾರನಿಗೆ ಆರಾಮದಾಯಕ ಪ್ರಯಾಣಕ್ಕೆ ನೆರವಾಗಲಿದೆ. ಕ್ರೂಸ್ ಬಟನ್ ಒತ್ತುವ ಮೂಲಕ ಸವಾರ ತನ್ನ ಇಚ್ಛೆಯ ವೇಗದಲ್ಲಿ ವಾಹನ ಚಲಾಯಿಸಬಹುದು.

ಫೇಮ್ 2 ಸಬ್ಸಿಡಿ ನಂತರ ಈ ಆಪ್ಟಿಮಾ ಎಚ್‌ಎಕ್ಸ್ ಎಲೆಕ್ಟ್ರಿಕ್‌ನ ಎಕ್ಸ್ ಶೋ ರೂಂ ಬೆಲೆ  55,580 ರೂಪಾಯಿಯಾಗುತ್ತದ. ಗ್ರಾಹಕರಿಗೆ ಅನುಕೂಲವಾಗಲು ವಾಹನದಲ್ಲಿ ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಅದರಲ್ಲಿ ಕ್ರೂಸ್ ನಿಯಂತ್ರಣ ಸೇರಿದೆ ಎಂದು ಕಂಪನಿ ಹೇಳಿದೆ.

ಗ್ರಾಹಕರ ಆಯ್ಕೆಯ ಮೇರೆಗೆ ಬ್ಲೂಟೂತ್, ಜಿಪಿಎಸ್ ಸಂಪರ್ಕವನ್ನು ಸ್ಕೂಟರ್‌ ನೊಂದಿಗೆ ಒದಗಿಸಲಾಗುತ್ತದೆ. ಹೊಸ ಹೀರೋ ಎಲೆಕ್ಟ್ರಿಕ್ ಕನೆಕ್ಟೆಡ್ ಬೈಕ್‌ಗಳನ್ನು ಸುರಕ್ಷಿತ, ಆರಾಮದಾಯಕ ಮತ್ತು ವಿನೋದಮಯವಾಗಿಸುತ್ತಿದ್ದೇವೆ ಎಂದು ಹೀರೋ ಎಲೆಕ್ಟ್ರಿಕ್‌ನ ಸಿಇಒ ಸೊಹಿಂದರ್ ಗಿಲ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...