alex Certify ಶಾಕಿಂಗ್: ಅತ್ತಿಗೆ ಕೂಡಿ ಹಾಕಿ ಅತ್ಯಾಚಾರ, ನೀಚ ಕೃತ್ಯಕ್ಕೆ ಗಂಡನಿಂದಲೂ ಸಾಥ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ಅತ್ತಿಗೆ ಕೂಡಿ ಹಾಕಿ ಅತ್ಯಾಚಾರ, ನೀಚ ಕೃತ್ಯಕ್ಕೆ ಗಂಡನಿಂದಲೂ ಸಾಥ್

ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ತನ್ನ ಪತಿ ಹಾಗೂ ಆತನ ಇಬ್ಬರು ಸಹೋದರರು ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿ ನಿರಂತರ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಮದುವೆಯಾದ ಸಂದರ್ಭದಲ್ಲಿ ಅನ್ಯೋನ್ಯವಾಗಿದ್ದ ಪತಿರಾಯ ನಂತರದಲ್ಲಿ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದ. ಸಣ್ಣ ವಿಚಾರಕ್ಕೂ ಜಗಳವಾಡಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ತನ್ನ ಸಹೋದರರಿಗೂ ಪತ್ನಿಗೆ ಕಿರುಕುಳ ನೀಡುವಂತೆ ತಿಳಿಸಿದ್ದ. ಈ ನಡುವೆ ಮಹಿಳೆಗೆ ಮಗುವಾಗಿ ಪೋಷಕರ ಮನೆಯಲ್ಲಿ ಉಳಿದುಕೊಂಡಿದ್ದಾಳೆ. ಕೆಲದಿನಗಳ ನಂತರ ಮತ್ತೆ ಗಂಡನ ಮನೆಗೆ ಆಗಮಿಸಿದ್ದ ಆಕೆಗೆ ಮತ್ತೆ ಕಿರುಕುಳ ನೀಡಲಾಗಿದೆ.

ಮನೆಯಲ್ಲಿ ಕೂಡಿಹಾಕಿ ಗಂಡ ಹಾಗೂ ಆತನ ಸಹೋದರರಿಬ್ಬರು ನಿರಂತರ ಅತ್ಯಾಚಾರ ಎಸಗಿ ಅಮಾನವೀಯವಾಗಿ ವರ್ತಿಸಿದ್ದಾರೆ. ಮಹಿಳೆ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...