ಬೆಂಗಳೂರು: ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಪ್ರೈ. ಲಿಮಿಟೆಡ್ ಕರ್ನಾಟಕದಲ್ಲಿ ಮೂರು ಹೊಸ ಅತ್ಯಾಧುನಿಕ “ಬ್ಲೂ ಸ್ಕ್ವೇರ್” ಔಟ್‌ಲೆಟ್‌ಗಳ (ಶೋರೂಮ್‌ಗಳ) ಉದ್ಘಾಟನೆಯನ್ನು ಘೋಷಿಸಿದೆ. ಕೆಆರ್ ಪುರಂನಲ್ಲಿ 8,945 ಚದರ ಅಡಿ ವಿಸ್ತಾರದ ‘ಐ ಆಟೋಮೊಬೈಲ್ಸ್ ಪ್ರೈ. ಲಿಮಿಟೆಡ್’, ಹೊಸಕೋಟೆಯಲ್ಲಿ 4,071 ಚದರ ಅಡಿ ಜಾಗದ ‘ಗರುಡ ವೀಲ್ಸ್’, ಮಂಡ್ಯದಲ್ಲಿ 5,800 ಚದರ ಅಡಿ ಜಾಗದಲ್ಲಿ ‘ಚಿರಾಗ್ ಮೋಟಾರ್ಸ್’- ಎಂಬ ಮೂರು ಹೊಸ ಎಕ್ಸ್‌ಕ್ಲೂಸಿವ್ ಔಟ್‌ಲೆಟ್‌ಗಳನ್ನು ಯಮಹಾ ಬೆಂಗಳೂರಿನ ಸುತ್ತಮುತ್ತ ತೆರೆದಿದೆ. ಹೊಸ ಬ್ಲೂ ಸ್ಕ್ವೇರ್ ಔಟ್‌ಲೆಟ್‌ಗಳನ್ನು ಹೆಚ್ಚು ವೈಯಕ್ತೀಕರಿಸಿದ ವಿಧಾನದ ಮೂಲಕ ಸಂಪೂರ್ಣ ಮಾರಾಟ, ಸೇವೆ ಮತ್ತು ನೆರವಿನ ಜೊತೆಗೆ ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ.
ಯಮಹಾದ ಮ್ಯಾಕ್ಸಿ-ಸ್ಪೋರ್ಟ್ಸ್ ಏರಾಕ್ಸ್ 155 ಸ್ಕೂಟರ್ ಅನ್ನು ಬ್ಲೂ ಸ್ಕ್ವೇರ್ ಶೋರೂಮ್‌ಗಳ ಮೂಲಕ ವಿಶೇಷವಾಗಿ ಮಾರಾಟ ಮಾಡಲಾಗುತ್ತದೆ. ಈ ಪ್ರೀಮಿಯಂ ಔಟ್‌ಲೆಟ್‌ಗಳು ವೈಝಡ್‌ಎಫ್-ಆರ್15 ವಿ4 (155ಸಿಸಿ), ವೈಝಡ್‌ಎಫ್-ಆರ್15ಎಸ್ ವಿ3 (155ಸಿಸಿ), ಎಂಟಿ-15 ವಿ2 (155ಸಿಸಿ), ಬ್ಲೂಕೋರ್ ತಂತ್ರಜ್ಞಾನ ಆಧರಿತ ಮಾದರಿಗಳಾದ ಎಫ್‌ಝಡ್‌ಎಸ್-ಎಫ್‌ಐ ವರ್ಷನ್ 4.0 (149ಸಿಸಿ), ಎಫ್‌ಝಡ್‌ಎಸ್-ಎಫ್‌ಐ ವರ್ಷನ್ 3.0 (149ಸಿಸಿ), ಎಫ್‌ಝಡ್-ಎಫ್‌ಐ ವರ್ಷನ್ 3.0 (149ಸಿಸಿ), ಎಫ್‌ಝಡ್-ಎಕ್ಸ್ (149ಸಿಸಿ), ಮತ್ತು ಸ್ಕೂಟರ್‌ಗಳಾದ ಫ್ಯಾಸಿನೋ 125 ಎಫ್‌ಐ ಹೈಬ್ರಿಡ್ (125ಸಿಸಿ), ರೇ ಝಡ್‌ಐರ್ 125 ಎಫ್‌ಐ ಹೈಬ್ರಿಡ್ (125ಸಿಸಿ), ರೇ ಝಡ್‌ಐರ್ ಸ್ಟ್ರೀಟ್ ರ್‍ಯಾಲಿ 125 ಎಫ್‌ಐ ಹೈಬ್ರಿಡ್ (125ಸಿಸಿ) ಸೇರಿದಂತೆ ನವೀಕರಿಸಲ್ಪಟ್ಟ 2023ನೇ ಸಾಲಿನ ಪ್ರೀಮಿಯಂ ದ್ವಿಚಕ್ರ ವಾಹನಗಳನ್ನು ಪ್ರದರ್ಶಿಸುತ್ತವೆ. ಹೆಚ್ಚು ಸಮಗ್ರವಾದ ಅನುಭವವನ್ನು ಒದಗಿಸುವ ಭರವಸೆಯನ್ನು ನೀಡುತ್ತಾ, ಈ ಪ್ರೀಮಿಯಂ ಬ್ಲೂ ಸ್ಕ್ವೇರ್ ಔಟ್‌ಲೆಟ್‌ಗಳು ಯಮಹಾದ ನಿಜವಾದ ಆ್ಯಕ್ಸೆಸರೀಸ್‌ಗಳು, ಅಧಿಕೃತ ಉಡುಪುಗಳು ಮತ್ತು ಯಮಹಾo ನಿಜವಾದ ಬಿಡಿಭಾಗಗಳನ್ನು ಗ್ರಾಹಕರಿಗೆ ಪ್ರದರ್ಶನ ಮತ್ತು ಮಾರಾಟ ಮಾಡುತ್ತವೆ.