alex Certify ಉಡುಪಿಯಲ್ಲಿ ‘ಬ್ಲೂ ಸ್ಕ್ವೇರ್’ ಮಳಿಗೆ ತೆರೆದ ಯಮಹಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಡುಪಿಯಲ್ಲಿ ‘ಬ್ಲೂ ಸ್ಕ್ವೇರ್’ ಮಳಿಗೆ ತೆರೆದ ಯಮಹಾ

ಬೆಂಗಳೂರು: ಇಂಡಿಯಾ ಯಮಹಾ ಮೋಟಾರ್ (IYM) ಪ್ರೈ. ಲಿಮಿಟೆಡ್ ಕರ್ನಾಟಕದ ಉಡುಪಿಯಲ್ಲಿ ಅತ್ಯಾಧುನಿಕ “ಬ್ಲೂ ಸ್ಕ್ವೇರ್” ಮಳಿಗೆಯನ್ನು ತೆರೆಯುವುದಾಗಿ ಇಂದು ಘೋಷಿಸಿದೆ. ‘ಮೆ| ಉಡುಪಿ ಮೋಟರ್ಸ್’ ಬ್ಯಾನರ್ ಅಡಿಯಲ್ಲಿ ಯಮಹಾದ ಬ್ಲೂ ಸ್ಕ್ವೇರ್ ಮಳಿಗೆಗಳನ್ನು 2,750 ಚ. ಅಡಿ ವಿಸ್ತಾರವಾದ ಜಾಗದಲ್ಲಿ ಆರಂಭಿಸಲಾಗಿದ್ದು, ಎಂಡ್-ಟು-ಎಂಡ್ ಮಾರಾಟ, ಸರ್ವೀಸ್ (ಸೇವೆ) ಮತ್ತು ಹೆಚ್ಚು ವೈಯಕ್ತಿಕವಾದ ವಿಧಾನದ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ.

ಯಮಹಾದ ಬ್ಲೂ ಸ್ಕ್ವೇರ್ ಮಳಿಗೆಗಳು ಬ್ರ್ಯಾಂಡ್‌ನ ನೈಜ ಸ್ಫೂರ್ತಿಯನ್ನು ಸಾರುತ್ತವೆ. ಮಾರಾಟ, ಸೇವೆ ಮತ್ತು ಬೆಂಬಲವನ್ನು ಒಳಗೊಂಡಿರುವ ಉತ್ಕೃಷ್ಟ ಎಂಡ್-ಟು-ಎಂಡ್ ಅನುಭವವನ್ನು ಗ್ರಾಹಕರಿಗೆ ಒದಗಿಸಲು ಅವುಗಳನ್ನು ನಿಖರವಾಗಿ ವಿನ್ಯಾಸಗೊಳಿಸಲಾಗಿದೆ. ವೈಯಕ್ತಿಕಗೊಳಿಸಿದ ವಿಧಾನವು ಒಂದು ನಿದರ್ಶನವಾಗಿದ್ದು, ಪ್ರತಿಯೊಬ್ಬ ಗ್ರಾಹಕರೂ ಅಮೂಲ್ಯವೆಂದು ಪರಿಗಣಿಸುತ್ತದೆ ಮತ್ತು ಅವರ ಸಂತೃಪ್ತಿಯನ್ನು ಖಚಿತಪಡಿಸುತ್ತದೆ. ಈ ವಿಶೇಷ ಮಳಿಗೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ, ಯಮಹಾ ರೇಸಿಂಗ್ ಜಗತ್ತಿನ ಹೆಬ್ಬಾಗಿಲನ್ನು ಗ್ರಾಹಕರಿಗೆ ತೆರೆಯುವ ಗುರಿಯನ್ನು ಈ ಬ್ರ್ಯಾಂಡ್ ಹೊಂದಿದೆ.

ಅಂತಾರಾಷ್ಟ್ರೀಯ ಮೋಟಾರ್ ‌ಸ್ಪೋರ್ಟ್‌ಗಳಲ್ಲಿ ಆಳವಾಗಿ ಬೇರೂರಿರುವ ಜಾಗತಿಕ ಬ್ರ್ಯಾಂಡ್ ಆಗಿರುವ ಯಮಹಾ ಜೊತೆಗೆ ಸಂಬಂಧ ಹೊಂದಿರುವುದೇ ಹೆಮ್ಮೆ ಎಂಬ ಭಾವನೆಯನ್ನು ಮೂಡಿಸಲು ಈ ಪ್ರೀಮಿಯಂ ಮಳಿಗೆಗಳ ಪ್ರತಿಯೊಂದು ವಿಭಾಗವನ್ನೂ ಚಿಂತನಶೀಲವಾಗಿ ರಚಿಸಲಾಗಿದೆ. ಈ ತತ್ತ್ವದಿಂದ ಪ್ರೇರಿತವಾಗಿ, ಬ್ರ್ಯಾಂಡ್‌ನ ಹೆಮ್ಮೆಯ ರೇಸಿಂಗ್ ಪರಂಪರೆಯನ್ನು ಪ್ರತಿನಿಧಿಸುವ “ಬ್ಲೂ” ಮತ್ತು ಗ್ರಾಹಕರು ಯಮಹಾದ ಆಹ್ಲಾದಕರ, ಸ್ಪೋರ್ಟಿ ಮತ್ತು ಸ್ಟೈಲಿಶ್ ಶ್ರೇಣಿಯ ದ್ವಿಚಕ್ರ ವಾಹನಗಳೊಂದಿಗೆ ಸಂಪರ್ಕ ಸಾಧಿಸಲು ರೂಪಿಸಲಾಗಿರುವ ವೇದಿಕೆಯನ್ನು ಸಂಕೇತಿಸುವ “ಸ್ಕ್ವೇರ್”ನ ಸಂಯೋಜನೆಯ ಮೂಲಕ ಯಮಹಾ ಸಂಸ್ಥೆಯು ಗ್ರಾಹಕರೊಂದಿಗೆ ತ್ವರಿತ ಸಂಪರ್ಕವನ್ನು ಸಾಧಿಸಲು ಸಾಧ್ಯವಾಗಲಿದೆ.

ಮಾರಾಟ ಮತ್ತು ಬೆಂಬಲದಲ್ಲಿ ಉದ್ಯಮದಲ್ಲೇ ವಿಶಿಷ್ಟವಾದ ಅನುಭವವನ್ನು ಒದಗಿಸುವ ಜೊತೆಗೆ, ಈ ಬ್ಲೂ ಸ್ಕ್ವೇರ್ ಮಳಿಗೆಗಳು ಯಮಹಾದ ವಿಶೇಷ ಬೈಕರ್ ಸಮುದಾಯವಾದ ಬ್ಲೂ ಸ್ಟ್ರೀಕ್ಸ್ ಸವಾರರಿಗೆ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತವೆ, ಅವರು ಇತರ ಸವಾರರೊಂದಿಗೆ ಬೆರೆಯಲು ಹಾಗೂ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ.

ಯಮಹಾದ ಮ್ಯಾಕ್ಸಿ-ಸ್ಪೋರ್ಟ್ಸ್ AEROX 155 ಸ್ಕೂಟರ್ ಅನ್ನು ಬ್ಲೂ ಸ್ಕ್ವೇರ್ ಶೋರೂಮ್‌ಗಳ ಮೂಲಕವೇ ವಿಶೇಷವಾಗಿ ಮಾರಾಟ ಮಾಡಲಾಗುತ್ತದೆ. ಈ ಪ್ರೀಮಿಯಂ ಮಳಿಗೆಗಳು YZF-R15 V4 (155cc), YZF-R15S V3 (155cc), MT-15 V2 (155cc) ಸೇರಿದಂತೆ ನವೀಕರಿಸಿದ 2023ರ ಶ್ರೇಣಿಯ ಪ್ರೀಮಿಯಂ ದ್ವಿಚಕ್ರ ವಾಹನಗಳನ್ನು; ಬ್ಲೂ-ಕೋರ್ ತಂತ್ರಜ್ಞಾನ-ಚಾಲಿತ ಮಾದರಿಗಳಾದ FZS-Fi ಆವೃತ್ತಿ 4.0 (149cc), FZS-Fi ಆವೃತ್ತಿ 3.0 (149cc), FZ-Fi ಆವೃತ್ತಿ 3.0 (149cc), FZ-X (149cc), ಮತ್ತು ಫ್ಯಾಸಿನೊ 125 FI ಹೈಬ್ರಿಡ್ (125cc), js ZR ZR FI ಹೈಬ್ರಿಡ್ (125cc), ರೇ ZR ಸ್ಟ್ರೀಟ್ ರ‍್ಯಾಲಿ, FI 125 ಹೈಬ್ರಿಡ್ (125cc) ಪ್ರದರ್ಶಿಸುತ್ತವೆ. ಹೆಚ್ಚು ಸಮಗ್ರ ಅನುಭವವನ್ನು ಒದಗಿಸುವ ಭರವಸೆಯ ಮೇರೆಗೆ, ಈ ಪ್ರೀಮಿಯಂ ಬ್ಲೂ ಸ್ಕ್ವೇರ್ ಮಳಿಗೆಗಳು ಗ್ರಾಹಕರಿಗೆ ಯಮಹಾದ ಅತ್ಯಾಧುನಿಕ ಮತ್ತು ನೈಜ ಪರಿಕರಗಳು, ಅಧಿಕೃತ ಉಡುಪುಗಳು ಮತ್ತು ಯಮಹಾದ ನೈಜ ಬಿಡಿಭಾಗಗಳನ್ನೂ ಪ್ರದರ್ಶನ ಮತ್ತು ಮಾರಾಟ ಮಾಡುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...