alex Certify Gruhalakshmi Scheme :`ರೇಷನ್ ಕಾರ್ಡ್’ ನಲ್ಲಿ `ಯಜಮಾನಿ’ ಎಂದು ತಿದ್ದುಪಡಿ ಮಾಡಲು ಸೆ.14 ರವರೆಗೆ ಅವಕಾಶ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Gruhalakshmi Scheme :`ರೇಷನ್ ಕಾರ್ಡ್’ ನಲ್ಲಿ `ಯಜಮಾನಿ’ ಎಂದು ತಿದ್ದುಪಡಿ ಮಾಡಲು ಸೆ.14 ರವರೆಗೆ ಅವಕಾಶ!

ಬೆಂಗಳೂರು :  ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಮಹಿಳೆಯರಿಗೆ  ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ರೇಷನ್ ಕಾರ್ಡ್ ನಲ್ಲಿ ಯಜಮಾನಿ ಎಂದು ತಿದ್ದುಪಡಿ ಮಾಡಲು ಸೆಪ್ಟೆಂಬರ್ 14ರವರೆಗೆ ಅವಕಾಶ ನೀಡಲಾಗಿದೆ. ಪಡಿತರ ಚೀಟಿಯಲ್ಲಿ ಕುಟುಂಬದ ಯಜಮಾನಿಯ ಸ್ಥಾನದ ತಿದ್ದುಪಡಿಗಳಿದ್ದಲ್ಲಿ, ಕೂಡಲೇ ಅರ್ಜಿ ಸಲ್ಲಿಸಿ ಹಾಗೂ ಯೋಜನೆಯ ಪ್ರಯೋಜನ ಪಡೆಯಬಹುದು.

ಹೌದು, ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿಗೆ ಸೆಪ್ಟೆಂಬರ್ 14 ರವರಗೆ ಅವಕಾಶ ನೀಡಲಾಗಿದ್ದು, ಅರ್ಹ ಮಹಿಳೆಯರು ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ ಎಂದು ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 9 ರಿಂದ 14ರ ವರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಪಡಿತರ ಚೀಟಿ ಫಲಾನುಭವಿಗಳ ಮಾಹಿತಿ ತಿದ್ದುಪಡಿ, ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗಿದೆ.

ಸೆಪ್ಟೆಂಬರ್ 6 ರಿಂದ 8 ರವರೆಗೆ ಬಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್, ಚಿತ್ರದುರ್ಗ, ದಾವಣಗೆರೆ, ಕೋಲಾರ, ಕಲಬುರಗಿ, ರಾಮನಗರ, ರಾಯಚೂರು, ಯಾದಗಿರಿ, ವಿಜಯನಗರ, ತುಮಕೂರು, ಶಿವಮೊಗ್ಗ ಜಿಲ್ಲೆಯ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸೆಪ್ಟೆಂಬರ್ 9 ರಿಂದ 11 ರವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಫಲಾನಿಭವಿಗಳಿಗೆ ಮಾಹಿತಿ ತಿದ್ದುಪಡಿ, ಹೆಸರು ಸೇರ್ಪಡೆಗೆ ಅವಕಾಶ ಇದೆ.

ಸೆಪ್ಟಂಬರ್ 12ರ ರಿಂದ 14ರವರೆಗೆ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಬಾಗಲಕೋಟೆ, ಚಾಮರಾಜನಗರ, ಬೆಳಗಾವಿ, ಕೊಡಗು, ಹಾವೇರಿ, ಹಾಸನ, ಗದಗ, ಮೈಸೂರು, ಮಂಡ್ಯ, ಉತ್ತರ ಕನ್ನಡ, ಉಡುಪಿ, ವಿಜಯಪುರ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಲಾಗಿದೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಪಡಿತರ ಚೀಟಿಯಲ್ಲಿ ತಿದ್ದುಪಡಿ ಅಥವಾ ಸೇರ್ಪಡೆಗೆ ಅವಕಾಶ ನೀಡಿದೆ. ಗೃಹಲಕ್ಷ್ಮಿಯೋಜನೆಯ ಲಾಭ ಪಡೆಯಲು ಕುಟುಂಬದ ಯಜಮಾನಿಯ ಸ್ಥಾನ ಬದಲಾಯಿಸುವ ಅವಶ್ಯಕತೆ ಇದ್ದಲ್ಲಿ ಅರ್ಜಿ ಸಲ್ಲಿಸಬಹುದು.

ಯಾವೆಲ್ಲ ಸಂದರ್ಭಗಳಲ್ಲಿ ಬದಲಾಯಿಸಬಹುದು?

ಯಜಮಾನಿಯ ಸ್ಥಾನದಲ್ಲಿರುವ ಮಹಿಳೆ ನಿಧನರಾಗಿದ್ದರೆ

ಪಡಿತರ ಚೀಟಿಯಲ್ಲಿ ಪುರುಷ ಕುಟುಂಬದ ಮುಖ್ಯಸ್ಥನಾಗಿದ್ದರೆ

ಯಜಮಾನಿಯ ಸ್ಥಾನವನ್ನು ಅತ್ತೆಯಿಂದ ಸೊಸೆಗೆ ಅಥವಾ ಸೊಸೆಯಿಂದ ಅತ್ತೆಗೆ ವರ್ಗಾಯಿಸಬೇಕಾಗಿದ್ದರೆ

ಯೋಜನೆಗೆ ಇದುವರೆಗೂ ನೋಂದಾಯಿಸದೇ ಇರುವವರು ಯಜಮಾನಿಯ ಬದಲಾವಣೆ ಮಾಡಿಕೊಳ್ಳಬಹುದು.

ಸೂಚನೆ : ಯೋಜನೆಯಡಿ ಈಗಾಗಲೇ ನೋಂದಾಯಿಸಿ ಯಜಮಾನಿಯ ಬದಲಾವಣೆಗೆ ಅರ್ಜಿ ಸಲ್ಲಿಸಿದಲ್ಲಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಈ ಅರ್ಜಿ ಇತ್ಯರ್ಥಗೊಳ್ಳುವವರೆಗೂ ಗೃಹಲಕ್ಷ್ಮಿ ಯೋಜನೆಯ ಲಾಭ ತಡೆಹಿಡಿಯಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...