ನವದೆಹಲಿ: ನೂತನ ಎಫ್ ಡಿ ಐ ನಿಯಮಗಳಿಂದಾಗಿ ಭಾರತದಲ್ಲಿ ಯಾಹೂ ನ್ಯೂಸ್ ತನ್ನ ವೆಬ್ ಸೈಟ್ ನ್ನು ಸ್ಥಗಿತಗೊಳಿಸುತ್ತಿದೆ.
ಭಾರತದಲ್ಲಿ ಡಿಜಿಟಲ್ ವಿಷಯವನ್ನು ನಿರ್ವಹಿಸುವ ಹಾಗೂ ಪ್ರಕಟಿಸುವ ಮಾಧ್ಯಮ ಕಂಪನಿಗಳ ವಿದೇಶಿ ಮಾಲೀಕತ್ವವನ್ನು ಸೀಮಿತಗೊಳಿಸುವ ಹೊಸ ವಿದೇಶಿ ನೇರ ಹೂಡಿಕೆ (ಎಫ್ ಡಿಐ) ನಿಯಮಗಳಿಂದಾಗಿ ಭಾರತದಲ್ಲಿ ಯಾಹೂ ತನ್ನ ಸುದ್ದಿ ವೈಬ್ ಸೈಟ್ ಗಳನ್ನು ಸ್ಥಗಿತಗೊಳಿಸಲಿದೆ.
ಇದರಲ್ಲಿ ಯಾಹೂ ನ್ಯೂಸ್, ಯಾಹೂ ಕ್ರಿಕೆಟ್, ಹಣಕಾಸು, ಮನರಂಜನೆ ಹಾಗೂ ಮೇಕರ್ಸ್ ಇಂಡಿಯಾ ಸೇರಿವೆ. ಆದರೆ ಇದು ಬಳಕೆದಾರರ ಯಾಹೂ ಇಮೇಲ್ ಹಾಗೂ ಯಾಹೂ ಸರ್ಚ್ (ಹುಡುಕಾಟ) ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.
ಮದುವೆ ಶಾಸ್ತ್ರಕ್ಕೂ ಮುನ್ನ ವಧು ಮಾಡಿದ ಕೆಲಸ ಕಂಡು ದಂಗಾದ ನೆಟ್ಟಿಗರು..!
“ಆಗಸ್ಟ್ 20, 2021ರಿಂದ ಯಾಹೂ ಇನ್ನು ಮುಂದೆ ಯಾವುದೇ ವಿಷಯವನ್ನು ಪ್ರಕಟಿಸುವುದಿಲ್ಲ. ನಿಮ್ಮ ಯಾಹೂ ಖಾತೆ, ಇಮೇಲ್ ಹಾಗೂ ಯಾಹೂ ಹುಟುಕಾಟದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ, ಅವು ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಓದುಗರಿಗೆ ಹಾಗೂ ಕಳೆದ ಎರಡು ದಶಕಗಳಿಂದ ಇಲ್ಲಿಯವರೆಗೆ ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳು” ಎಂದು ಯಾಹೂ ವೆಬ್ ಸೈಟ್ ನಲ್ಲಿ ತಿಳಿಸಿದೆ.
ಅಕ್ಟೋಬರ್ ನಲ್ಲಿ ಜಾರಿಗೆ ಬರುವ ಹೊಸ ಎಫ್ ಡಿ ಐ ನಿಯಮಗಳ ಪ್ರಕಾರ, ಭಾರತದ ಡಿಜಿಟಲ್ ಮಾಧ್ಯಮ ಕಂಪನಿಗಳು ಕೇಂದ್ರ ಸರಕಾರ ಅನುಮೋದನೆಗೆ ಒಳಪಟ್ಟು ವಿದೇಶಿ ಹೂಡಿಕೆಯ ರೂಪದಲ್ಲಿ ಶೇ.26 ರಷ್ಟು ಹೂಡಿಕೆಯನ್ನು ಸ್ವೀಕರಿಸಬಹುದು.