alex Certify ಯಾದಗಿರಿಯಲ್ಲಿ ಪೈಶಾಚಿಕ ಕೃತ್ಯ: ರಾತ್ರಿ ಹೊತ್ತಲ್ಲಿ ಮಹಿಳೆ ಬೆತ್ತಲೆಗೊಳಿಸಿ ಅಂಗಾಂಗ ಮುಟ್ಟಿ ವಿಕೃತ ವರ್ತನೆ, ಕಬ್ಬಿನ ಜಲ್ಲೆಯಿಂದ ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾದಗಿರಿಯಲ್ಲಿ ಪೈಶಾಚಿಕ ಕೃತ್ಯ: ರಾತ್ರಿ ಹೊತ್ತಲ್ಲಿ ಮಹಿಳೆ ಬೆತ್ತಲೆಗೊಳಿಸಿ ಅಂಗಾಂಗ ಮುಟ್ಟಿ ವಿಕೃತ ವರ್ತನೆ, ಕಬ್ಬಿನ ಜಲ್ಲೆಯಿಂದ ಹಲ್ಲೆ

ಯಾದಗಿರಿ: ಯಾದಗಿರಿ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಪೈಶಾಚಿಕ ಕೃತ್ಯವೆಸಗಿದ್ದಾರೆ. ರಾತ್ರಿ ವೇಳೆಯಲ್ಲಿ ಮಹಿಳೆಯ ಮೇಲೆ ಅಮಾನವೀಯವಾಗಿ ದೌರ್ಜನ್ಯ ನಡೆಸಲಾಗಿದೆ. ಮಹಿಳೆಯನ್ನು ಬೆತ್ತಲೆಗೊಳಿಸಿ ಕಬ್ಬಿನ ಜಲ್ಲೆಯಿಂದ ಥಳಿಸಲಾಗಿದ್ದು, ಅಂಗಾಂಗಗಳನ್ನು ಮುಟ್ಟಿ ವಿಕೃತವಾಗಿ ವರ್ತಿಸಿದ್ದಾರೆ.

ನಾಲ್ಕೈದು ಜನರ ಗುಂಪಿನಿಂದ ಕೃತ್ಯ ನಡೆದಿರುವ ಶಂಕೆ ಇದೆ. ಹಲ್ಲೆ ನಡೆಸಿದವರು ಯಾರು? ಹಲ್ಲೆಗೊಳಗಾದ ಮಹಿಳೆ ಯಾರು ಎಂಬುದು ಗೊತ್ತಾಗಿಲ್ಲ. ಇನ್ನು ಈ ಕುರಿತಾಗಿ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿಲ್ಲ. ಯಾದಗಿರಿ -ಶಹಾಪುರ ಮಾರ್ಗದ ಹೆದ್ದಾರಿ ಬಳಿಯ ಜಮೀನೊಂದರಲ್ಲಿ ರಾತ್ರಿ ವೇಳೆ ಮಹಿಳೆಯನ್ನು ಬೆತ್ತಲೆಗೊಳಿಸಿ ಕಬ್ಬಿನ ಜಲ್ಲೆಯಿಂದ ಹಲ್ಲೆ ಮಾಡಲಾಗಿದ್ದು, ಹಲ್ಲೆಕೋರರೇ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ಮಹಿಳೆಯನ್ನು ನಗ್ನಗೊಳಿಸಿ ಕಬ್ಬಿನ ಜಿಲ್ಲೆಯಿಂದ ಥಳಿಸಿದ್ದಲ್ಲದೇ, ಅಂಗಾಂಗಗಳನ್ನು ಮುಟ್ಟಿ ವಿಕೃತಿ ತೋರಲಾಗಿದೆ. ಮಹಿಳೆ ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿದ್ದು, ಆಕೆಗೆ ಮೊಬೈಲ್ ತೋರಿಸುತ್ತಾ ಇದರಲ್ಲಿರುವುದು ನೀನೇ ಅಲ್ಲವೇ ಎಂದು ಕೇಳಿ ಹಲ್ಲೆ ನಡೆಸಲಾಗಿದೆ. ಈ ಪೈಶಾಚಿಕ ಕೃತ್ಯದ ವಿಡಿಯೋ ವೈರಲ್ ಆಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...