alex Certify ಮದುವೆ ನಂತರವೂ ಪ್ರೀತಿ ಮುಂದುವರೆಸಿದ ಯುವತಿ ಪ್ರಿಯಕರನೊಂದಿಗೆ ಸೇರಿ ದುಡುಕಿನ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ನಂತರವೂ ಪ್ರೀತಿ ಮುಂದುವರೆಸಿದ ಯುವತಿ ಪ್ರಿಯಕರನೊಂದಿಗೆ ಸೇರಿ ದುಡುಕಿನ ನಿರ್ಧಾರ

ಯಾದಗಿರಿ: ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹುರುಸಗುಂಡಗಿ ಗ್ರಾಮದಲ್ಲಿ ನಡೆದಿದೆ.

22 ವರ್ಷದ ಯುವಕ ಹಾಗೂ 20 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡವರು. 6 -7 ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು. ಆದರೆ, ಮನೆಯವರಿಗೆ ವಿಚಾರ ತಿಳಿಸಿರಲಿಲ್ಲ, ಅವರಿಗೂ ಗೊತ್ತಿರಲಿಲ್ಲ. ವಡಗೇರಾ ತಾಲೂಕಿನ ಗೋಡಿಹಾಳ ಗ್ರಾಮದ ಯುವಕನೊಂದಿಗೆ ಯುವತಿ ಮದುವೆ ಮಾಡಲಾಗಿದೆ. ದಂಪತಿ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಗಂಡನಿಗೆ ಗೊತ್ತಾಗದಂತೆ ಯುವತಿ ಆಗಾಗ ಪ್ರಿಯಕರನನ್ನು ಭೇಟಿಯಾಗುತ್ತಿದ್ದಳು. ದೇವರ ದರ್ಶನಕ್ಕೆ ಹೋಗುವುದಾಗಿ ಬೆಂಗಳೂರಿಗೆ ತೆರಳಿ ಯುವತಿ ಭೇಟಿಯಾದ ಪ್ರಿಯಕರ ಆಕೆಯೊಂದಿಗೆ ಊರಿಗೆ ಮರಳಿದ್ದಾನೆ. ಬೆಳಗಿನ ಜಾವ ಗ್ರಾಮದ ಹೊರವಲಯದ ಹಳ್ಳದ ಬಳಿ ಇಬ್ಬರೂ ವಿಷ ಸೇವಿಸಿದ್ದಾರೆ. ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು, ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಪ್ರೀತಿಸಿದ್ದರೂ ಮನೆಯವರಿಗೆ ವಿಷಯ ತಿಳಿಸದಿರುವುದೇ ದುರಂತಕ್ಕೆ ಕಾರಣವೆನ್ನಲಾಗಿದೆ. ಭೀಮರಾಯನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...