alex Certify ‘ಶವರ್​’ ನಲ್ಲಿ ಹಸ್ತಮೈಥುನ ಮಾಡಿಕೊಳ್ಳುವುದಕ್ಕೆ ನಿರ್ಬಂಧ: ನೆಟ್ಟಿಗರ ತಲೆಕೆಡಿಸಿದ ನಕಲಿ ನೋಟಿಸ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಶವರ್​’ ನಲ್ಲಿ ಹಸ್ತಮೈಥುನ ಮಾಡಿಕೊಳ್ಳುವುದಕ್ಕೆ ನಿರ್ಬಂಧ: ನೆಟ್ಟಿಗರ ತಲೆಕೆಡಿಸಿದ ನಕಲಿ ನೋಟಿಸ್​

ಐಐಟಿ ರೂರ್ಕಿಗೆ ಸೇರಿದ್ದು ಎನ್ನಲಾದ ನಕಲಿ ನೋಟಿಸ್​ ಒಂದು ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು ಇದರಿಂದ ಜನರು ಗೊಂದಲಕ್ಕೀಡಾಗಿದ್ದಾರೆ. 2019ರ ವರ್ಷದ ಈ ನೋಟಿಸ್​ನಲ್ಲಿ ವಿದ್ಯಾರ್ಥಿಗಳು ಶವರ್​ನಲ್ಲಿ ಹಸ್ತಮೈಥುನ ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಬರೆಯಲಾಗಿದೆ.

ಶವರ್​ಗಳಲ್ಲಿ ಹಸ್ತ ಮೈಥುನ ಮಾಡಿಕೊಳ್ಳುವುದು ಹಾಸ್ಟೆಲ್​ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದಂತೆ ಎಂದು ಈ ನೋಟಿಸ್​ನಲ್ಲಿ ತಿಳಿಸಲಾಗಿದೆ. ಚರಂಡಿಯಲ್ಲಿ ಅಪಾರ ಪ್ರಮಾಣದ ವೀರ್ಯ ಶೇಖರಣೆಯಾಗುತ್ತಿದ್ದು, ಇವುಗಳ ನಿರ್ವಹಣೆ ಮಾಡಲು ಸಾವಿರಾರು ರೂಪಾಯಿ ಖರ್ಚು ಹಾಸ್ಟೆಲ್​ ಮೇಲೆ ಬೀಳುತ್ತಿದೆ ಎಂದು ನಕಲಿ ನೋಟಿಸ್​ನಲ್ಲಿ ತಿಳಿಸಲಾಗಿದೆ.

ಇದರ ಜೊತೆಯಲ್ಲಿ ವಿದ್ಯಾರ್ಥಿಗಳು ಇನ್ಮೇಲೆ ತಮ್ಮ ಕೋಣೆಯಲ್ಲಿಯೇ ಹಸ್ತಮೈಥುನ ಮಾಡಿಕೊಳ್ಳಬೇಕು. ಮೀಡಿಯಂ ಮಿಠಾಯಿ ಎಂಬ ಹೆಸರಿನ ಎಕ್ಸ್ ಖಾತೆಯು ಈ ಪೋಸ್ಟ್​ನ್ನು ಶೇರ್​ ಮಾಡಿದ್ದು ಸಖತ್​ ವೈರಲ್​ ಆಗಿದೆ. ಇದು ನಿಜವೇ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಇದು ನಿಜವಾದ ನೋಟಿಸ್​ ಎಂದು ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ. ಆದರೆ ಅಸಲಿಗೆ ಇದೊಂದು ನಕಲಿ ನೋಟಿಸ್​ ಪ್ರತಿಯೆಂದು ತಿಳಿದು ಬಂದಿದೆ. ಈ ನಕಲಿ ನೋಟಿಸ್​ನಲ್ಲಿ ಹಾಸ್ಟೆಲ್​ ಮುಖ್ಯ ವಾರ್ಡನ್​​ ಅಶುತೋಷ್​ ಚಮೋಲಿ ನಕಲಿ ಸಹಿಯನ್ನು ಕಾಣಬಹುದಾಗಿದೆ.

ಚರಂಡಿಯಲ್ಲಿ ವೀರ್ಯ ನಿರ್ವಹಣೆ ಕಷ್ಟವಾಗ್ತಿದೆ ಎಂದರೆ ಇದಕ್ಕೆ ಏನಾದರೂ ಅರ್ಥವಿದೆಯೇ ಎಂದು ಎಕ್ಸ್​ ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದರು. ಇನ್ನೂ ಕೆಲವರು ಹಸ್ತಮೈಥುನದಿಂದ ಯುವಕರಿಗೆ ಶಕ್ತಿ ಸಿಗುತ್ತೆ ಎಂದೂ ಸಹ ಬರೆದುಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...