alex Certify ಮನಕಲಕುತ್ತೆ ಜೈಲಿನಿಂದ ಹೊರ ಬಂದ ಕೈದಿ ಕೋವಿಡ್​ನಿಂದ ಮೃತಪಟ್ಟ ಕರುಣಾಜನಕ ಕತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಕಲಕುತ್ತೆ ಜೈಲಿನಿಂದ ಹೊರ ಬಂದ ಕೈದಿ ಕೋವಿಡ್​ನಿಂದ ಮೃತಪಟ್ಟ ಕರುಣಾಜನಕ ಕತೆ….!

ಬರೋಬ್ಬರಿ 9 ವರ್ಷಗಳ ಕಾಲ ಕೊಲೆ ಆರೋಪದ ಅಡಿಯಲ್ಲಿ ಜೈಲು ಶಿಕ್ಷೆ ಅನುಭವಿಸಿ ಸೆರೆಮನೆ ವಾಸದಿಂದ ಹೊರಬಂದು ಹೊಸ ಬದುಕನ್ನು ಕಟ್ಟಿಕೊಂಡಿದ್ದ ವ್ಯಕ್ತಿಯೊಬ್ಬ ಕೋವಿಡ್​ 19ನಿಂದ ಸಾವಿಗೀಡಾಗಿದ್ದಾನೆ.

ಮೃತ ವ್ಯಕ್ತಿ ಡ್ಯಾಮನ್​​ ಟಿಬೊಡಾಕ್ಸ್ ಸಹೋದರ ಈ ವಿಚಾರವಾಗಿ ಮಾತನಾಡಿದ್ದು ನನ್ನ ಸಹೋದರನ ಶೂಶ್ರೂಷೆ ಮಾಡುತ್ತಿದ್ದ ನರ್ಸ್​ ಕೂಡ ಆತನ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಆತ ಸ್ನೇಹಮಯಿ ಎಂದು ಹೇಳಿದ್ದರು. ಹೌದು..! ಅದು ನನ್ನ ಸಹೋದರ. ಆತ ತುಂಬಾನೆ ಒಳ್ಳೆಯ ವ್ಯಕ್ತಿಯಾಗಿದ್ದ ಎಂದು ಹೇಳಿದ್ದಾರೆ.
47 ವರ್ಷದ ಡ್ಯಾಮನ್​ 1997ರಲ್ಲಿ ಮಾಡದ ತಪ್ಪಿಗೆ ಜೈಲುಶಿಕ್ಷೆಗೆ ಒಳಗಾಗಿದ್ದರು. 2012ರಲ್ಲಿ ಜೈಲಿನಿಂದ ಬಿಡುಗಡೆ ಹೊಂದಿದ್ದ ಡೇವಿಡ್​ ಟೆಕ್ಸಾಸ್​ನಲ್ಲಿ ವಾಣಿಜ್ಯ ಟ್ರಕ್​ ಚಾಲಕನಾಗಿದ್ದರು. ಜೈಲಿನಿಂದ ಹೊರ ಬಂದ ಬಳಿಕ ಡ್ಯಾಮನ್​ ಅತ್ಯಂತ ಸುಂದರವಾಗಿ ತನ್ನ ಜೀವನವನ್ನು ಕಟ್ಟಿಕೊಂಡಿದ್ದ ಎಂದು ಡ್ಯಾಮನ್​ ಸಹೋದರ ಹೇಳಿದ್ದಾರೆ.

ಆತನಿಗೆ ಯಾರ ಮೇಲೂ ದ್ವೇಷವಿರಲಿಲ್ಲ. ಮಾಡದ ತಪ್ಪಿಗೆ ಶಿಕ್ಷೆ ಪಡೆದುಕೊಂಡಿದ್ದು ಆತನಿಗೆ ಎಲ್ಲರ ಮೇಲೆ ಕೋಪ ಬರಬೇಕಿತ್ತು. ಆದರೆ ಡ್ಯಾಮನ್ ತನ್ನನ್ನು ಬಂಧಿಸಿದವರನ್ನೂ ಕ್ಷಮಿಸು ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದ ಎಂದು ಡೇವಿಡ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...