ಬರೋಬ್ಬರಿ 9 ವರ್ಷಗಳ ಕಾಲ ಕೊಲೆ ಆರೋಪದ ಅಡಿಯಲ್ಲಿ ಜೈಲು ಶಿಕ್ಷೆ ಅನುಭವಿಸಿ ಸೆರೆಮನೆ ವಾಸದಿಂದ ಹೊರಬಂದು ಹೊಸ ಬದುಕನ್ನು ಕಟ್ಟಿಕೊಂಡಿದ್ದ ವ್ಯಕ್ತಿಯೊಬ್ಬ ಕೋವಿಡ್ 19ನಿಂದ ಸಾವಿಗೀಡಾಗಿದ್ದಾನೆ.
ಮೃತ ವ್ಯಕ್ತಿ ಡ್ಯಾಮನ್ ಟಿಬೊಡಾಕ್ಸ್ ಸಹೋದರ ಈ ವಿಚಾರವಾಗಿ ಮಾತನಾಡಿದ್ದು ನನ್ನ ಸಹೋದರನ ಶೂಶ್ರೂಷೆ ಮಾಡುತ್ತಿದ್ದ ನರ್ಸ್ ಕೂಡ ಆತನ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಆತ ಸ್ನೇಹಮಯಿ ಎಂದು ಹೇಳಿದ್ದರು. ಹೌದು..! ಅದು ನನ್ನ ಸಹೋದರ. ಆತ ತುಂಬಾನೆ ಒಳ್ಳೆಯ ವ್ಯಕ್ತಿಯಾಗಿದ್ದ ಎಂದು ಹೇಳಿದ್ದಾರೆ.
47 ವರ್ಷದ ಡ್ಯಾಮನ್ 1997ರಲ್ಲಿ ಮಾಡದ ತಪ್ಪಿಗೆ ಜೈಲುಶಿಕ್ಷೆಗೆ ಒಳಗಾಗಿದ್ದರು. 2012ರಲ್ಲಿ ಜೈಲಿನಿಂದ ಬಿಡುಗಡೆ ಹೊಂದಿದ್ದ ಡೇವಿಡ್ ಟೆಕ್ಸಾಸ್ನಲ್ಲಿ ವಾಣಿಜ್ಯ ಟ್ರಕ್ ಚಾಲಕನಾಗಿದ್ದರು. ಜೈಲಿನಿಂದ ಹೊರ ಬಂದ ಬಳಿಕ ಡ್ಯಾಮನ್ ಅತ್ಯಂತ ಸುಂದರವಾಗಿ ತನ್ನ ಜೀವನವನ್ನು ಕಟ್ಟಿಕೊಂಡಿದ್ದ ಎಂದು ಡ್ಯಾಮನ್ ಸಹೋದರ ಹೇಳಿದ್ದಾರೆ.
ಆತನಿಗೆ ಯಾರ ಮೇಲೂ ದ್ವೇಷವಿರಲಿಲ್ಲ. ಮಾಡದ ತಪ್ಪಿಗೆ ಶಿಕ್ಷೆ ಪಡೆದುಕೊಂಡಿದ್ದು ಆತನಿಗೆ ಎಲ್ಲರ ಮೇಲೆ ಕೋಪ ಬರಬೇಕಿತ್ತು. ಆದರೆ ಡ್ಯಾಮನ್ ತನ್ನನ್ನು ಬಂಧಿಸಿದವರನ್ನೂ ಕ್ಷಮಿಸು ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದ ಎಂದು ಡೇವಿಡ್ ಹೇಳಿದ್ದಾರೆ.