
ಕೆಲ ತಿಂಗಳ ಹಿಂದೆ ಟೊಮೆಟೊ ಬೆಲೆ ಮುಗಿಲು ಮುಟ್ಟಿದ ಕಾರಣ ಗ್ರಾಹಕರು ಕಂಗಾಲಾಗುವಂತೆ ಆಗಿತ್ತು. ಕೈಕೊಟ್ಟ ಮಳೆ, ಸಕಾಲಕ್ಕೆ ಬಾರದ ಬೆಳೆ ಮೊದಲಾದ ಕಾರಣಗಳಿಂದ ಟೊಮೆಟೊ ಬೆಲೆ ಕೈಗೆಟುಕದಂತಾಗಿತ್ತು.
ಇದೀಗ ಮಾರುಕಟ್ಟೆಗೆ ಟೊಮೆಟೊ ಎಂದಿನಂತೆ ಸರಬರಾಜಾಗುತ್ತಿದ್ದು, ಬೆಲೆ ಇನ್ನಿಲ್ಲದಂತೆ ಕುಸಿತ ಕಂಡಿದೆ. ಗುರುವಾರದಂದು ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಅತ್ಯಂತ ಕಡಿಮೆ ಬೆಲೆಗೆ ಹರಾಜಾಗಿದ್ದು, ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಗುರುವಾರದ ಹರಾಜಿನಲ್ಲಿ 15 ಕೆಜಿ ನಾಟಿ ಟೊಮೆಟೊ ಬಾಕ್ಸ್ ಕನಿಷ್ಠ 50 ಹಾಗೂ ಗರಿಷ್ಠ 150 ರೂಪಾಯಿಗಳಿಗೆ ಮಾರಾಟವಾಗಿದ್ದರೆ, ಕಡಿಮೆ ಗುಣಮಟ್ಟದ ಕೆಜಿ ಟೊಮೆಟೊಗೆ ಕನಿಷ್ಠ 3 ರೂಪಾಯಿ ಹಾಗೂ ಗುಣಮಟ್ಟದ ಟೊಮೆಟೊಗೆ ಗರಿಷ್ಠ 10 ರೂಪಾಯಿ ಬೆಲೆ ಸಿಕ್ಕಿದೆ.