ಸೆರೆಯಲ್ಲಿರುವ ಮೊಸಳೆಗಳ ಪೈಕಿ ಜಗತ್ತಿನಲ್ಲೇ ಅತ್ಯಂತ ಹಿರಿಯನಾದ ಮುಜಾ ತನ್ನ 85ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದೆ.
ಸರ್ಬಿಯಾದಲ್ಲಿ ಸರಣಿ ಬಾಂಬಿಂಗ್ ಅನ್ನು ಎದುರಿಸಿ ಬದುಕುಳಿದಿರುವ ಮುಜಾ, 1937ರ ಆಗಸ್ಟ್ನಲ್ಲಿ ಜರ್ಮನಿಯಿಂದ ಯುಗೋಸ್ಲಾವಿಯಾದ ಹಿಂದಿನ ರಾಜಧಾನಿ ಬೆಲ್ಗ್ರೇಡ್ಗೆ ಬಂದಿದ್ದ. ಈತ ಹುಟ್ಟಿದ ದಿನ ಯಾವುದೆಂದು ಮೃಗಾಲಯದ ಸಿಬ್ಬಂದಿಗೆ ಸ್ಪಷ್ಟವಿಲ್ಲ. ಆದರೆ ಈ ಮೃಗಾಲಯಕ್ಕೆ ಬಂದ ವೇಳೆ ಮುಜಾಗೆ ಎರಡು ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.
ಮಗ ಎಂದುಕೊಂಡಿದ್ದವನು ಸಂಬಂಧದಲ್ಲಿ ತನ್ನ ಮಾವ ಎಂದು ತಿಳಿದು ಶಾಕ್ ಆದ ವ್ಯಕ್ತಿ..!
ಮಾಸ್ಕೋ ಮೃಗಾಲಯದ ಸ್ಯಾಟರ್ನ್ ಕಳೆದ ಮೇ ವರೆಗೂ, ಸೆರೆಯಲ್ಲಿರುವ ಮೊಸಳೆಗಳ ಪೈಕಿ ಜಗತ್ತಿನ ಅತ್ಯಂತ ಹಿರಿಯ ಮೊಸಳೆಯಾಗಿತ್ತು. ಮೇ ತಿಂಗಳಲ್ಲಿ ಸ್ಯಾಟರ್ನ್ ಮೃತಪಟ್ಟ ಬಳಿಕ ಮುಜಾ ಆ ಹುದ್ದೆಗೇರಿದ್ದಾನೆ.
ʼವಿಘ್ನ ನಿವಾರಕʼನ ಅನುಗ್ರಹವಿದೆ ಈ ರಾಶಿಗೆ
ದ್ವಿತೀಯ ವಿಶ್ವ ಮಹಾಯುದ್ಧದ ಬಾಂಬಿಂಗ್ ಎದುರಿಸಿ ಬದುಕುಳಿದು ಬಂದಿರುವ ಮುಜಾ, ಮೃಗಾಲಯದ 12×7 ಮಿಟರ್ ಕೊಳವನ್ನು ಬಿಟ್ಟು ಹೊರಜಗತ್ತನ್ನು ಕಂಡೇ ಇಲ್ಲ.