ಹಾಂಗ್ಕಾಂಗ್ನ ಪಾರ್ಕಿಂಗ್ ಜಾಗವೊಂದು ಬರೋಬ್ಬರಿ 10 ಮಿಲಿಯನ್ ಹಾಂಗ್ಕಾಂಗ್ ಡಾಲರ್ ಅಂದರೆ 9.43 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಈ ಮೂಲಕ ಇದು ಈವರೆಗೆ ಮಾರಾಟವಾದ ಅತ್ಯಂತ ದುಬಾರಿ ಬೆಲೆಯ ಪಾರ್ಕಿಂಗ್ ಜಾಗ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಹಾಂಗ್ಕಾಂಗ್ನ ದಿ ಪೀಕ್ನಲ್ಲಿರುವ ವಿಶೇಷ ಮೌಂಟ್ ನಿಕೋಲ್ಸನ್ ಡೆವಲಪ್ಮೆಂಟ್ ಹಲವಾರು ಪಾರ್ಕಿಂಗ್ ಪ್ರದೇಶವನ್ನ ಮಾರಾಟ ಮಾಡಿದೆ.
ಡೆವಲಪರ್ಗಳಾದ ವಾರ್ಫ್ ಹಾಗೂ ನ್ಯಾನ್ ಫಂಗ್ ಗ್ರೂಪ್ ಐಷಾರಾಮಿ ಯೋಜನೆಯ 2ನೆ ಹಾಗೂ 3ನೆ ಹಂತದಲ್ಲಿ 29ಪಾರ್ಕಿಂಗ್ ಸ್ಥಳಗಳನ್ನ ಟೆಂಡರ್ ಮೂಲಕ ಮನೆ ಮಾಲೀಕರಿಗೆ ಮಾರಾಟ ಮಾಡಿದೆ. ಇದರ ಮೊತ್ತವು 10 ಮಿಲಿಯನ್ ಹಾಂಗ್ಕಾಂಗ್ ಡಾಲರ್ಗಿಂತ ಹೆಚ್ಚು ಮೌಲ್ಯವನ್ನ ಹೊಂದಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. 134.5 ಚದರ ಅಡಿ ಪಾರ್ಕಿಂಗ್ ಸ್ಥಳ ಇದಾಗಿದ್ದು ಪ್ರತಿ ಚದರ ಅಡಿಗೆ 74350 ಡಾಲರ್ ಮೌಲ್ಯ ನಿಗದಿ ಮಾಡಲಾಗಿತ್ತು.