ರಕ್ತಕ್ಕೆ ಸಂಬಂಧಿಸಿದ ಕಾಯಿಲೆ ಹಿಮೋಫಿಲಿಯಾ ಗುಣಪಡಿಸಲು ಕಂಡುಹಿಡಿಯಲಾಗಿರುವ ಔಷಧವನ್ನು ಈಗ ಅನುಮೋದಿಸಲಾಗಿದ್ದು, ಇದರ ಬೆಲೆ ಜನಸಾಮಾನ್ಯರಿರಲಿ ಅತಿ ಶ್ರೀಮಂತರನ್ನೂ ಕಂಗೆಡಿಸುವಂತಿದೆ.
ಸಿಎಸ್ಎಲ್ ಬೆಹರಿಂಗ್ ಕಂಪನಿ ಹಿಮೆಜಿನಿಕ್ಸ್ ಎಂಬ ಹೆಸರಿನ ಈ ಔಷಧವನ್ನು ಅಭಿವೃದ್ಧಿಪಡಿಸಿದ್ದು, ಇದರ ಒಂದು ಡೋಸ್ ಬೆಲೆ 28 ಕೋಟಿ ರೂಪಾಯಿಗಳು ಎಂದು ಹೇಳಲಾಗಿದೆ.
ಈ ಔಷಧಿಗೆ ಈಗ ಅಮೆರಿಕದ ಔಷಧ ನಿಯಂತ್ರಣ ಸಂಸ್ಥೆ ಅನುಮೋದನೆ ನೀಡಿದ್ದು, ಇದರ ಒಂದು ಡೋಸ್ ನೀಡಿದರೆ ಒಂದು ವರ್ಷದಲ್ಲಿ ನಿರೀಕ್ಷಿತ ರಕ್ತಸ್ರಾವ ಪ್ರಮಾಣ ಶೇಕಡ 54 ರಷ್ಟು ಕಡಿಮೆಯಾಗಲಿದೆ ಎಂದು ಕಂಪನಿ ಹೇಳಿದೆ.