alex Certify ಶ್ರೀಲಂಕಾದಲ್ಲಿ ಪತ್ತೆಯಾಯ್ತು ಜಗತ್ತಿನ ಅತಿ ದೊಡ್ಡ ನೀಲಮಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀಲಂಕಾದಲ್ಲಿ ಪತ್ತೆಯಾಯ್ತು ಜಗತ್ತಿನ ಅತಿ ದೊಡ್ಡ ನೀಲಮಣಿ

ಜಗತ್ತಿನ ಅತಿ ದೊಡ್ಡ ನೀಲಮಣಿ ಕ್ಲಸ್ಟರ್‌ ಒಂದು ಶ್ರೀಲಂಕಾದಲ್ಲಿ ಪತ್ತೆಯಾಗಿದೆ. ಇಲ್ಲಿನ ರತ್ನಾಪುರ ಪ್ರದೇಶದ ರತ್ನಗಳ ವರ್ತಕರ ಮನೆಯೊಂದರಲ್ಲಿ ಬಾವಿ ತೋಡುತ್ತಿದ್ದ ವೇಳೆ ಈ ಕಲ್ಲು ಪತ್ತೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಿಳಿ-ನೀಲಿ ಬಣ್ಣದ ಈ ಶಿಲೆಯ ಮೌಲ್ಯವು $100 ದಶಲಕ್ಷಗಳಷ್ಟಿದೆ. 2.5 ಕ್ಯಾರೆಟ್‌ ಇರುವ ಈ ಕಲ್ಲು 510 ಕಿಲೋ ತೂಕವಿದೆ. ಈ ಕಲ್ಲಿಗೆ ’ಸೆರೆಂಡಿಪಿಟಿ ಸ್ಯಾಫೈರ್‌’ ಎಂದು ಹೆಸರಿಡಲಾಗಿದೆ.

ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಆಗಸ್ಟ್ ನಲ್ಲಿ 15 ದಿನ ರಜೆ ಇಲ್ಲ

“ಇಷ್ಟು ದೊಡ್ಡ ನೀಲಮಣಿಯನ್ನು ನನ್ನ ಜೀವನದಲ್ಲಿ ನೋಡೇ ಇಲ್ಲ. ಬಹುಶಃ ಇದು 400 ದಶಲಕ್ಷ ವರ್ಷಗಳ ಹಿಂದೆ ರಚಿತವಾಗಿದೆ ಎನಿಸುತ್ತದೆ,” ಎಂದು ಶಿಲೆಗಳ ತಜ್ಞ ಡಾ. ಗಾಮಿನಿ ಜ಼ೊಯ್ಸಾ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...