ಜಗತ್ತಿನ ಅತಿ ದೊಡ್ಡ ನೀಲಮಣಿ ಕ್ಲಸ್ಟರ್ ಒಂದು ಶ್ರೀಲಂಕಾದಲ್ಲಿ ಪತ್ತೆಯಾಗಿದೆ. ಇಲ್ಲಿನ ರತ್ನಾಪುರ ಪ್ರದೇಶದ ರತ್ನಗಳ ವರ್ತಕರ ಮನೆಯೊಂದರಲ್ಲಿ ಬಾವಿ ತೋಡುತ್ತಿದ್ದ ವೇಳೆ ಈ ಕಲ್ಲು ಪತ್ತೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಿಳಿ-ನೀಲಿ ಬಣ್ಣದ ಈ ಶಿಲೆಯ ಮೌಲ್ಯವು $100 ದಶಲಕ್ಷಗಳಷ್ಟಿದೆ. 2.5 ಕ್ಯಾರೆಟ್ ಇರುವ ಈ ಕಲ್ಲು 510 ಕಿಲೋ ತೂಕವಿದೆ. ಈ ಕಲ್ಲಿಗೆ ’ಸೆರೆಂಡಿಪಿಟಿ ಸ್ಯಾಫೈರ್’ ಎಂದು ಹೆಸರಿಡಲಾಗಿದೆ.
ಬ್ಯಾಂಕ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಆಗಸ್ಟ್ ನಲ್ಲಿ 15 ದಿನ ರಜೆ ಇಲ್ಲ
“ಇಷ್ಟು ದೊಡ್ಡ ನೀಲಮಣಿಯನ್ನು ನನ್ನ ಜೀವನದಲ್ಲಿ ನೋಡೇ ಇಲ್ಲ. ಬಹುಶಃ ಇದು 400 ದಶಲಕ್ಷ ವರ್ಷಗಳ ಹಿಂದೆ ರಚಿತವಾಗಿದೆ ಎನಿಸುತ್ತದೆ,” ಎಂದು ಶಿಲೆಗಳ ತಜ್ಞ ಡಾ. ಗಾಮಿನಿ ಜ಼ೊಯ್ಸಾ ತಿಳಿಸಿದ್ದಾರೆ.