alex Certify BIG NEWS: ವಿಶ್ವದ ಅತಿದೊಡ್ಡ ವಿಮಾನ ನಮ್ಮ ಬೆಂಗಳೂರಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಶ್ವದ ಅತಿದೊಡ್ಡ ವಿಮಾನ ನಮ್ಮ ಬೆಂಗಳೂರಿಗೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ವಿಶ್ವದ ಅತಿ ದೊಡ್ಡ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬಂದಿಳಿಯಲಿದೆ.

ಏರ್ ಬಸ್ A380, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಮಿರೇಟ್ಸ್ ಏರ್ ಲೈನ್ಸ್ ನ ಡಬಲ್ ಡೆಕ್ಕರ್ ವಿಮಾನ ದುಬೈನಿಂದ ಬಂದಿಳಿಯಲಿದೆ.

ನಿಗದಿತ ಸಮಯಕ್ಕಿಂತ ಎರಡು ವಾರ ಮೊದಲೇ ಈ ವಿಮಾನ ಕೆ ಐಎ ಗೆ ಬರುತ್ತಿರುವುದು ವಿಶೇಷ. ವಿಶ್ವದ ಅತಿದೊಡ್ಡ ವಾಣಿಜ್ಯ ವಿಮಾನ ಇದಾಗಿದ್ದು, ಮೊದಲ ಬಾರಿ ಬೆಂಗಳೂರಿಗೆ ಆಗಮಿಸುತ್ತಿದೆ. ಮಧ್ಯಾಹ್ನ 3:40ರ ಸುಮಾರಿಗೆ ಬೆಂಗಳೂರಿಗೆ ಬರಲಿರುವ ವಿಮಾನ ನಂತರ ಸಂಜೆ ಬೆಂಗಳೂರಿನಿಂದ ದುಬೈಗೆ ವಾಪಸ್ ಆಗಲಿದೆ. ಏರ್ ಬಸ್ A380 ವಿಮಾನ ಹತ್ತುವ ಪ್ರಯಾಣಿಕರಿಗೆ ಇದು ಮೊದಲ ಐಷಾರಾಮಿ ಹಾರಾಟದ ಅನುಭವ ನೀಡಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...