ಎ380 ವಿಶ್ವದ ಅತಿದೊಡ್ಡ ವಿಮಾನ ಎನಿಸಿಕೊಂಡಿದ್ದು, ಅದು ಶೀಘ್ರವೇ ಬೆಂಗಳೂರಿಗೆ ಬರುತ್ತಿದೆ.
ಜನನಿಬಿಡ ಬೆಂಗಳೂರು- ದುಬೈ ಮಾರ್ಗದಲ್ಲಿ ಜಂಬೋ ಜೆಟ್ ಎಮಿರೇಟ್ಸ್ ಏರ್ಲೈನ್ಸ್ನ ನಿಯೋಜಿಸಿದ್ದು, ಅಕ್ಟೋಬರ್ 30 ರಿಂದ ಅದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ.
ಕೋಡ್ ಎ ವಿಮಾನದ ಬರುವಿಕೆಗೆ ಸಿದ್ಧತೆ ನಡೆದಿದ್ದು, ಕೋಡ್ ಎ ವಿಮಾನಗಳ ರೆಕ್ಕೆಗಳು 65 ಮೀಟರ್ಗಳಿಗಿಂತ ಹೆಚ್ಚಿದ್ದು 80 ಮೀಟರ್ಗಳಿಗಿಂತ ಕಡಿಮೆ. ಇರಲಿದೆ. ಇದೀಗ ಬರುವ ಅ380 ನ ರೆಕ್ಕೆಗಳು 79.8 ಮೀಟರ್ ಉದ್ದವಾಗಿದೆ.
ಕೋಡ್ ಎಫ್ ಅಡಿಯಲ್ಲಿ ಬೋಯಿಂಗ್ 747 ಏಕೈಕ ಪ್ರಯಾಣಿಕ ವಿಮಾನವಾಗಿದೆ. ಎ380 ಪೂರ್ಣ -ಉದ್ದದ ಡಬಲ್ ಡೆಕ್ಕರ್ ವಿಮಾನವಾಗಿದ್ದು, 500ಕ್ಕಿಂತ ಹೆಚ್ಚು ಆಸನ ಸಾಮರ್ಥ್ಯ ಹೊಂದಿದೆ. ದೆಹಲಿ ಮತ್ತು ಮುಂಬೈ ನಂತರ ಜಂಬೋ ಜೆಟ್ ಸ್ವೀಕರಿಸುವ ಮೂರನೇ ಭಾರತೀಯ ನಗರ ಬೆಂಗಳೂರು ಎನಿಸಿಕೊಂದಿದೆ. ಎ380 ಅನ್ನು ದೈನಂದಿನ ಸೇವೆಗೆ ನಿಯೋಜಿಸಿರುವ ಎರಡನೇ ಭಾರತೀಯ ನಗರವಾಗಿದೆ.
ವಿಮಾನಯಾನ ಸಂಸ್ಥೆಯು 2014ರಿಂದ ಮುಂಬೈ- ದುಬೈ ಮಾರ್ಗದಲ್ಲಿ ಎ380ಅನ್ನು ಹಾರಿಸುತ್ತಿದೆ. ಇದರಲ್ಲಿ ಎಕನಾಮಿ, ಬ್ಯುಸಿನೆಸ್ ಹಾಗೂ ಫಸ್ಟ್ ಕ್ಲಾಸ್ ಸೀಟಿಂಗ್ ವ್ಯವಸ್ಥೆ ಹೊಂದಿದೆ.
ಅಕ್ಟೋಬರ್ 30 ರಂದು ರಾತ್ರಿ 9.25ಕ್ಕೆ (ಸ್ಥಳಿಯ ಸಮಯ) ದುಬೈನಿಂದ ಟೇಕ್ ಆಫ್ ಆಗಲಿರುವ ವಿಮಾನ ಮರುದಿನ ಬೆಳಗಿನ ಜಾವ 2.30ಕ್ಕೆ ಬೆಂಗಳೂರಿಗೆ ಬರಲಿದೆ. ಪುನಃ 4.30ಕ್ಕೆ ವಾಪಸ್ ಹೊರಟು, ಅಕ್ಟೋಬರ್ 31 ರಂದು ಮತ್ತು ಬೆಳಿಗ್ಗೆ 7.10 ಕ್ಕೆ (ಸ್ಥಳಿಯ ಕಾಲಮಾನ) ದುಬೈನಲ್ಲಿ ಲ್ಯಾಂಡ್ ಆಗಲಿದೆ.
ಎ380ನ ಎಕಾನಮಿ ಕ್ಲಾಸ್ನಲ್ಲಿ ಹೆಚ್ಚುವರಿ ಲೆಗ್ರೂಮ್ನೊಂದಿಗೆ ವಿಶಾಲವಾಗಿರುತ್ತವೆ. ಬ್ಯುಸಿನೆಸ್ ಕ್ಲಾಸ್ನಲ್ಲಿ ಸೀಟು ಸಮತಟ್ಟಾಗಿರುತ್ತದೆ. ಫಸ್ಟ್ ಕ್ಲಾಸ್ನಲ್ಲಿ ಖಾಸಗಿ ಸೂಟ್ಗಳು ಮತ್ತು ಶವರ್ ಸ್ಪಾಗಳನ್ನು ಹೊಂದಿರುತ್ತದೆ.