
ಕಲಾವಿದ ಸಾಸ್ವತ್ ರಂಜನ್ ಸಾಹೂ ಈ ಕಲಾಕೃತಿಯನ್ನ ನಿರ್ಮಾಣ ಮಾಡೋಕೆ 4 ದಿನಗಳನ್ನ ತೆಗೆದುಕೊಂಡ್ರು. ಇದು ಪ್ಯಾನಾಸೋನಿಕ್ ಸ್ಟೀರಿಯೋದ ರೆಪ್ಲಿಕಾ ಆಗಿದೆ ಎಂದು ಕಲಾವಿದ ಹೇಳಿದ್ದಾರೆ.
ಈ ಕಲಾಕೃತಿಯನ್ನ ನಿರ್ಮಾಣ ಮಾಡಿ ರೇಡಿಯೋಗೆ ಗೌರವ ಸಲ್ಲಿಸೋದ್ರ ಜೊತೆಗೆ ಆಕಾಶವಾಣಿಯ ಕಾರ್ಯಕ್ರಮಗಳನ್ನ ಕೇಳೋದನ್ನ ನಿಲ್ಲಿಸದಿರಿ ಎಂದು ಜನರಲ್ಲಿ ಮನವಿ ಮಾಡಿದ್ದೇನೆ. ನಾಲ್ಕು ದಿನಗಳನ್ನ ತೆಗೆದುಕೊಂಡು 3130 ಬೆಂಕಿ ಕಡ್ಡಿಯನ್ನ ಬಳಸಿ ಈ ಕಲಾಕೃತಿ ನಿರ್ಮಿಸಿದ್ದೇನೆ ಎಂದು ಸಾಸ್ವತ್ ಹೇಳಿದ್ದಾರೆ.