ಜಾಗತಿಕ ಮಟ್ಟದಲ್ಲಿ ಆಹಾರ ಪದಾರ್ಥಗಳ ಬೆಲೆಗಳು 2021ರಲ್ಲಿ ದಾಖಲೆಯ 28%ನಷ್ಟು ಏರಿಕೆಯಾಗಿದ್ದು, ದಶಕದಲ್ಲೇ ಅತಿ ದೊಡ್ಡ ದರದ ಹಣದುಬ್ಬರಕ್ಕೆ ಈಡಾಗಿವೆ ಎಂದು ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಓ) ತಿಳಿಸಿದೆ.
ಜಾಗತಿಕ ವಹಿವಾಟು ಕಾಣುವ ಆಹಾರ ಪದಾರ್ಥಗಳ ಬೆಲೆಗಳ ಮೇಲೆ ನಿಗಾ ಇಡುವ ಎಫ್‌ಎಓನ ಆಹಾದ ಬೆಲೆ ಸೂಚ್ಯಂಕವು 2021ರಲ್ಲಿ ಸರಾಸರಿ 125.7ರಲ್ಲಿ ಇತ್ತು. 2011ರಲ್ಲಿ ಇದೇ ಸೂಚ್ಯಂಕ 139.1 ಇತ್ತು.
’83’ ಓಟಿಟಿ ಪ್ಲಾಟ್ ಫಾರಂನಲ್ಲಿ ರಿಲೀಸ್ ಆಗುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ
ಮಾಸಿಕ ಸೂಚ್ಯಂಕವು ಡಿಸೆಂಬರ್‌ನಲ್ಲಿ ಕೊಂಚ ಸಡಿಲಗೊಂಡಿದ್ದರೂ ಸಹ ಅದರ ಹಿಂದಿನ ನಾಲ್ಕು ತಿಂಗಳ ಅವಧಿಯಲ್ಲಿ ತೀವ್ರವಾಗಿ ಏರಿಕೆ ಕಂಡಿತ್ತು. ಇಳುವರಿ ಕುಸಿತದ ವೇಳೆಯಲ್ಲೇ ತೀವ್ರವಾದ ಬೇಡಿಕೆಯನ್ನು ಸಹ ಈ ಸರಾಸರಿ ಸೂಚ್ಯಂಕ ಪ್ರತಿಫಲಿಸಿತ್ತು.
ಕೊರೋನಾ ವೈರಸ್ ಕಾಟದಿಂದ ಚೇತರಿಕೆ ಕಾಣಲು ಹೋರಾಡುತ್ತಿರುವ ದೇಶಗಳ ಆರ್ಥಿಕ ಯಂತ್ರಗಳಿಗೆ ಆಹಾರ ಪದಾರ್ಥಗಳ ಹಣದುಬ್ಬರದ ಏರಿಕೆ ದೊಡ್ಡ ಪೆಟ್ಟು ಕೊಟ್ಟಿದೆ.