alex Certify ಮರಗಳ ಮಧ್ಯೆ ಸಿಲುಕಿದ ಹಸು ರಕ್ಷಣೆ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರಗಳ ಮಧ್ಯೆ ಸಿಲುಕಿದ ಹಸು ರಕ್ಷಣೆ ವಿಡಿಯೋ ವೈರಲ್

ಚಂಡಮಾರುತ ಐಡಾದಿಂದಾಗಿ ಲೌಸಿಯಾನಾ ಮತ್ತು ಮಿಸ್ಸಿಸ್ಸಿಪಿಯಲ್ಲಿ ಹಲವು ಕಡೆ ಜೀವನ ದುಸ್ತರವಾಗಿದೆ. ಚಂಡಮಾರುತದಿಂದಾಗಿ ಸೆಂಟ್ ಬರ್ನರ್ಡ್ ಪರೀಶ್ ಸ್ಥಳದಲ್ಲಿ ಜೀವಗಳಿಗೆ ಮಾರಕವಾಗಿರುವ ಪ್ರವಾಹದ ಬಗ್ಗೆ ನ್ಯೂ ಓರ್ಲಿಯನ್ಸ್ ನ್ಯಾಷನಲ್ ವೆತೆರ್ ಸರ್ವಿಸ್ ಎಚ್ಚರಿಸಿದೆ. ಹಲವು ರಕ್ಷಣಾ ಕಾರ್ಯಾಚರಣೆಯಲ್ಲಿ ಮರಗಳ ಮಧ್ಯೆ ಸಿಲುಕಿರುವ ಹಸುವೊಂದನ್ನು ರಕ್ಷಿಸಿದ ವಿಡಿಯೋ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ನೀರಿನ ರಭಸಕ್ಕೆ ಹಸುವೊಂದು ಕೊಚ್ಚಿ ಹೋಗಿ ಮರ ಮತ್ತು ಕೊಂಬೆಗಳ ಮದ್ಯೆ ಸಿಲುಕಿ ನರಳಾಡುತ್ತಿತ್ತು. ರಕ್ಷಣಾ ಸಿಬ್ಬಂದಿಗಳು ಅತ್ಯಂತ ನಾಜೂಕಾಗಿ ಮರದ ಕೊಂಬೆಗಳನ್ನು ಕಡಿದು, ಹಸುವನ್ನು ಬಿಡುಗಡೆಗೊಳಿಸಿದ 33 ಸೆಕೆಂಡ್ ವಿಡಿಯೋ ವೈರಲ್ ಆಗಿದೆ.

ಹಿರಿಯ ಪತ್ರಕರ್ತ, ಬಿಜೆಪಿ ಮುಖಂಡ ಚಂದನ್ ಮಿತ್ರಾ ವಿಧಿವಶ

ರಾಯ್ಟರ್ಸ್ ವರದಿಯಂತೆ, ಐಡಾ ಯುನೈಟೆಡ್ ಸ್ಟೇಟ್ಸ್ ಗಲ್ಫ್ ಕೋಸ್ಟ್ಗೆ ಅಪ್ಪಳಿಸಿದ ಅತ್ಯಂತ ಬಲವಾದ ಚಂಡಮಾರುತ. ಇದರಿಂದಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ವಿದ್ಯುತ್ ಗ್ರಿಡ್ ಸಂಪೂರ್ಣ ಹಾಳಾಗಿದ್ದು, ಇಡೀ ಲೌಸಿಯಾನಾ ದಲ್ಲಿ ವಿದ್ಯುತ್ ಇಲ್ಲದೆ ಜನರು ಪರದಾಡುತ್ತಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...