alex Certify ಈ ವಿಡಿಯೋ ನೋಡಿದ್ರೆ ನೀವೆಂದೂ ಸೇವಿಸಲಾರಿರಿ ರಸ್ಕ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಡಿಯೋ ನೋಡಿದ್ರೆ ನೀವೆಂದೂ ಸೇವಿಸಲಾರಿರಿ ರಸ್ಕ್…!

ಚಹದ ಜೊತೆಗೆ ಬಿಸ್ಕಟ್​, ರಸ್ಕ್​ಗಳನ್ನು ಇಷ್ಟಪಡುವವರ ಪೈಕಿ ನೀವು ಒಬ್ಬರಾಗಿದ್ದರೆ ಈ ವಿಡಿಯೋವನ್ನೊಮ್ಮೆ ನೋಡಿ ಬಿಡಿ. ಮುಂದೆಂದೂ ನೀವು ರಸ್ಕ್​ ಸೇವನೆ ಮಾಡುವ ಬಗ್ಗೆ ಯೋಚನೆ ಮಾಡಲು ಕೂಡ ಹೋಗೋದಿಲ್ಲ.

ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕರೆಲ್ಲ ಸೇರಿ ರಸ್ಕ್​ ತಯಾರಿಸುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಈ ವಿಡಿಯೋದಲ್ಲಿ ಕಾರ್ಮಿಕರು ಪ್ಯಾಕ್​ ಮಾಡುವ ಮುನ್ನ ಟ್ರೇನಲ್ಲಿ ಇಡಲಾಗಿದ್ದ ರಸ್ಕ್​ಗಳನ್ನು ಬೇಕಂತಲೆ ಮೆಟ್ಟಿದ್ದಾರೆ. ಇದು ಸಾಲದು ಎಂಬಂತೆ ಓರ್ವ ಕಾರ್ಮಿಕನಂತೂ ಪ್ಯಾಕೆಟ್​ನಲ್ಲಿ ರಸ್ಕ್​ಗಳನ್ನು ಇರಿಸುವ ಮುನ್ನ ನೆಕ್ಕಿ ಕೂಡ ನೋಡಿದ್ದಾನೆ. ಕಾರ್ಮಿಕರು ಬೇಕಂತಲೆ ಈ ರೀತಿ ಮಾಡ್ತಿದ್ದಾರೆ ಅನ್ನೋದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅನೇಕರು ಇನ್ಮೇಲೆ ಟೋಸ್ಟ್‌ – ರಸ್ಕ್​ ಸೇವನೆ ಮಾಡೋದೇ ಇಲ್ಲ ಎಂದು ಹೇಳಿದರೆ ಇನ್ನು ಹಲವರು ಈ ಕಾರ್ಮಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.

View this post on Instagram

A post shared by GiDDa CoMpAnY -mEmE pAgE- (@giedde)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...