alex Certify ಮನಕಲಕುವ ಘಟನೆ: ತೋಟದಲ್ಲೇ ಕಾರ್ಮಿಕ ಸಾವು, ಹೃದಯಾಘಾತದಿಂದ ಅಸುನೀಗಿದ ಮಾಲೀಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಕಲಕುವ ಘಟನೆ: ತೋಟದಲ್ಲೇ ಕಾರ್ಮಿಕ ಸಾವು, ಹೃದಯಾಘಾತದಿಂದ ಅಸುನೀಗಿದ ಮಾಲೀಕ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿಕಾರ್ಮಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ವಿಷಯ ತಿಳಿದ ಮಾಲೀಕನಿಗೂ ಹೃದಯಾಘಾತವಾಗಿ ಅವರು ಕೂಡ ಸಾವನ್ನಪ್ಪಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದಲ್ಲಿ ಘಟನೆ ನಡೆದಿದೆ. ಕೂಲಿಕಾರ್ಮಿಕ ಭರ್ಮಪ್ಪ ತೋಟದಲ್ಲಿ ಕೆಲಸ ಮಾಡುವಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ವಿಷಯ ತಿಳಿದ ಮಾಲೀಕ ದುಗ್ಗಪ್ಪಗೌಡ(75) ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ದುಗ್ಗಪ್ಪಗೌಡರ ತೋಟದ ಕೆಲಸಕ್ಕೆ ಬಂದಿದ್ದ ಭರ್ಮಪ್ಪ ಮಧ್ಯಾಹ್ನದವರೆಗೆ ಕೆಲಸ ಮಾಡಿ 3 ಗಂಟೆಗೆ ವೇಳೆಗೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ವಿಚಾರವನ್ನು ಮನೆಯವರಿಗೆ ತಿಳಿಸಲು ಮನೆ ಕಡೆಗೆ ಹೊರಟಿದ್ದ ದುಗ್ಗಪ್ಪಗೌಡ ಮಾರ್ಗಮಧ್ಯದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...