ಕೊರೋನಾ ಪಿಡುಗು ಶುರುವಾದಾಗ್ಲಿಂದ ವರ್ಕ್ ಫ್ರಮ್ ಹೋಂ ಪದ್ಧತಿ ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೆ ಪ್ರಸಿದ್ಧವಾಗ್ತಿದೆ. ಕಚೇರಿಗೆ ಬಂದು ವೈರಸ್ ಗೆ ತುತ್ತಾಗುವ ಬದಲು ಮನೆಯಿಂದಲೆ ಕೆಲಸ ಮಾಡಿ ಎಂದು ಎರಡು ವರ್ಷಗಳ ಹಿಂದೆ ಎಲ್ಲಾ ಐಟಿ ಕಂಪನಿಗಳು ವರ್ಕ್ ಫ್ರಂ ಹೋಂ ಪದ್ಧತಿಯನ್ನ ಜಾರಿಗೊಳಿಸಿದ್ದವು.
ಇದು ಇಷ್ಟು ದಿನ ಮುಂದುವರೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಇತ್ತೀಚೆಗೆ ಹಲವು ಕಂಪನಿಗಳು ವರ್ಕ್ ಫ್ರಂ ಹೋಂ ಜೊತೆಗೆ ಕಚೇರಿಯಲ್ಲಿ ಕೆಲಸ ಮಾಡಲು ಬಯಸುವವರಿಗೆ ಆಯ್ಕೆ ನೀಡಿರುವ ಸಾಕಷ್ಟು ಉದಾಹರಣೆಗಳಿವೆ.
ಇನ್ನೇನು ಎಲ್ಲಾ ಸರಿಹೋಯ್ತು, ಮತ್ತೆ ಕಚೇರಿಗೆ ಹೋಗಿ ಕೆಲಸ ಮಾಡಬಹುದು ಅಂದ್ಕೊಂಡಿದ್ದವರಿಗೆ ಡೆಲ್ಟಾ, ಒಮಿಕ್ರಾನ್ ಅಡ್ಡಿಯಾಗಿವೆ. ಮನೆಯಲ್ಲಿ ಕುಳಿತು ಕೆಲಸ ಮಾಡುವುದು ಎಲ್ಲರ ಪಾಲಿನ ತುತ್ತಲ್ಲಾ. ಆದರೆ ಬೇರೆ ಆಯ್ಕೆಯಿಲ್ಲ. ಬಹುಶಃ ಮುಂದಿನ ವರ್ಷವು ವರ್ಕ್ ಫ್ರಂ ಹೋಮ್ ಮುಂದುವರೆಸುವ ಸೂಚನೆ ಇದೆ. ಹೀಗಾಗಿ ಭಾರತ ಸರ್ಕಾರ ಈ ವಿಭಾಗಕ್ಕೆ ಹೊಸ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆಯಿದೆ. ಇದರಲ್ಲಿ ವರ್ಕಿಂಗ್ ಅವರ್ಸ್ ಹಾಗೂ ಇಂಟರ್ನೆಟ್ ಸೇರಿದಂತೆ ಮನೆಯಲ್ಲೆ ಕುಳಿತು ಕೆಲಸ ಮಾಡುವಾಗ ಆಗುವ ಹೆಚ್ಚುವರಿ ಖರ್ಚುಗಳ ಬಗ್ಗೆಯು ಗಮನ ಹರಿಸಿದೆ ಎಂದು ವರದಿಯಾಗಿದೆ.
ಜಾಮೀನು ಪಡೆದ ನಾಲ್ಕೇ ದಿನದಲ್ಲಿ ಮತ್ತೆ ಜೈಲು ಪಾಲಾದ ಕಾರ್ ಕಳ್ಳ..!
ಸರ್ಕಾರದ ಉನ್ನತ ಅಧಿಕಾರಿಗಳ ಪ್ರಕಾರ ಈಗಾಗಲೇ ಇದರ ಬಗ್ಗೆ ಪರಿಗಣಿಸಿರುವ ಸರ್ಕಾರ, ಭವಿಷ್ಯದ ವರ್ಕ್ ಫಾರ್ಮ್ಯಾಟ್ ಗೆ ಬೇಕಾದ ಬದಲಾವಣೆ ತರಲು ಚಿಂತನೆ ನಡೆಸಿದೆ. ಇತ್ತೀಚೆಗೆ ಪೋರ್ಚುಗಲ್ ನಲ್ಲಿ ವರ್ಕ್ ಫ್ರಮ್ ಹೋಂ ವಿಭಾಗದಲ್ಲಿ ಸಾಕಷ್ಟು ಸುಧಾರಣೆಗಳನ್ನ ತರಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಭಾರತ ಸರ್ಕಾರ ಈ ಕ್ಷೇತ್ರದಲ್ಲಿ ಉದ್ಯೋಗಿಗಳು ಹಾಗೂ ಸಂಸ್ಥೆ ಇಬ್ಬರ ಸುಧಾರಣೆಗೂ ಹೊಸ ಹಾಗೂ ಸಹಾಯಕ ನಿಯಮಗಳನ್ನು ತರಲು ಸಿದ್ಧವಾಗಿದೆ. ಬಹುಶಃ ಹೊಸ ವರ್ಷದಲ್ಲಿ ಈ ಬಗ್ಗೆ ಅಧಿಕೃತ ಚರ್ಚೆಯಾಗಲಿದೆ ಎಂಬ ಮಾಹಿತಿಯಿದೆ.